ಬೆಂಗಳೂರು : ವಕೀಲರ ಭವನ ಕಟ್ಟಡ ಸಮಿತಿಗೆ ಸಂಬಂಧಿಸಿದಂತೆ ಸಮಿತಿಯನ್ನು ಪುನರ್ ರಚಿಸಲು ಅಧಿಸೂಚನೆ ಹೊರಡಿಸಲು ವಿಳಂಬನೀತಿ ಅನುಸರಿಸುವ ಹಿನ್ನಲೆಯಲ್ಲಿ ರಾಜ್ಯಸರಕಾರದ ಮುಖ್ಯಕಾರ್ಯದರ್ಶಿ ಕೋರ್ಟ್ಗೆ ಹಾಜರಾಗುವಂತೆ ಹೈಕೋರ್ಟ್ ಆದೇಶಿಸಿದೆ.
1996 ವಕೀಲರ ಭವನ ನಿರ್ಮಾಣದ ಸಂಬಂಧ ಏಕಸದಸ್ಯ ಪೀಠ ನೀಡಿದ ಆದೇಶ ಪ್ರಶ್ನಿಸಿ ಅಂದಿನ ಮುಖ್ಯಮಂತ್ರಿಗಳು ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿಯ ವಿಚಾರಣೆಯನ್ನು ನಡೆಸಿ ಕಟ್ಟಡ ಸಮಿತಿಯನಗನು ಹೈಕೋರ್ಟ್ ನೇಮಿಸಿತ್ತು.
1996ರಲ್ಲಿ ಹೈಕೋರ್ಟ್ ನೇಮಿಸಿದ್ದ ಕಟ್ಟಡ ಸಮಿತಿಯಲ್ಲಿ ಮಾಜಿ ಅಡ್ವೋಕೇಟ್ ಜನರಲ್ ಆರ್.ಎನ್.ನರಸಿಂಹಮೂರ್ತಿ ಮುಖ್ಯಸ್ಥರಾಗಿದ್ದು ಹಾಗೂ ವಕೀಲರಾಗಿದ್ದ ನ್ಯಾ.ಕೆ.ಎಲ್. ಮಂಜುನಾಥ್ ಸದಸ್ಯರಾಗಿದ್ದರು. ಆದರೆ ಆರ್.ಎನ್.ನರಸಿಂಹಮೂರ್ತಿ ಈಗ ಮೃತರಾಗಿದ್ದು, ವಕೀಲರಾಗಿದ್ದ ನ್ಯಾ.ಕೆ.ಎಲ್. ಮಂಜುನಾಥ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನಿಯುಕ್ತಿಯಾದ ಹಿನ್ನಲೆ ಕಟ್ಟಡ ಸಮಿತಿಯಲ್ಲಿನ ಎರಡು ಸ್ಥಾನಗಳು ತೆರವಾಗಿದ್ದವು.
ಕಟ್ಟಡ ಸಮಿತಿ ತೆರವಾದ ಸ್ಥಾನಕ್ಕೆ ಹಿರಿಯ ವಕೀಲ ಬಿ.ವಿ. ಆಚಾರ್ಯ ಮತ್ತು ವಕೀಲ ಡಿ.ಎನ್ .ನಂಜುಂಡ ರೆಡ್ಡಿ ಅವರನ್ನು ನೇಮಕ ಮಾಡುವಂತೆ ಹೈಕೋರ್ಟ್ ಆದೇಶಿಸಿತ್ತಲ್ಲದೆ ಸಮಿತಿಯನ್ನು ಪುನರ್ ರಚಿಸುವಂತೆ ರಾಜ್ಯ ಸರ್ಕಾರ ಅಧಿಸೂಚನೆ ಪ್ರಕಟಿಸಬೇಕು ಎಂದು ನಿರ್ದೇಶಿತ್ತು. ಆದರೆ ಇದನ್ನು ಪಾಲಿಸದ ಹಿನ್ನಲೆ ಸ್ವತಃ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಹೈಕೋರ್ಟ್ಗೆ ಹಾಜರಾಗುವಂತೆ ಆದೇಶಿಸಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.