ಮುಂಬಯಿ: ಒಂದು ಅಸಹಜ ಘಟನೆಯಲ್ಲಿ ವಿಮಾನ ತಂತ್ರಜ್ಞನೋರ್ವ ಏರ್ ಇಂಡಿಯಾ ವಿಮಾನದ ಇಂಜಿನ್ ಒಳಕ್ಕೆ ಎಳೆಯಲ್ಪಟ್ಟು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ನಿಲ್ದಾಣದಲ್ಲಿ ವಿಮಾನ ಹಿಂದಕ್ಕೆ ಸರಿಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದೆ.
ಮುಂಬಯಿ-ಹೈದರಾಬಾದ್ ವಿಮಾನದ ಸಹ ಪೈಲಟ್ ಸಿಗ್ನಲ್ನ್ನು ತಪ್ಪಾಗಿ ಗುರುತಿಸಿದ ಪರಿಣಾಮ ವಿಮಾನದ ಸಮೀಪದಲ್ಲೇ ನಿಂತಿದ್ದ ರವಿ ಸುಬ್ರಹ್ಮಣ್ಯನ್ ವಿಮಾನ ಇಂಜಿನ್ ಒಳಕ್ಕೆ ಎಳೆಯಲ್ಪಟ್ಟರು ಎನ್ನಲಾಗಿದೆ. ಘಟನೆಯು ಛತ್ರಪತಿ ಶಿವಾಜಿ ದೇಶೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ.
ಇದೊಂದು ಅಸಹಜ ಘಟನೆಯಾಗಿದೆ. ವಿಮಾನ ಅಪಘಾತ ತನಿಖಾ ಬ್ಯೂರೋಗೆ ಮಾಹಿತಿ ನೀಡಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಏರ್ ಇಂಡಿಯಾದ ಉಪ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಏರ್ ಇಂಡಿಯಾ ಮುಖ್ಯಸ್ಥ ಆಶ್ವನಿ ಲೊಹಾನಿ, ಈ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.