ನವದೆಹಲಿ: ತನ್ನ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅಕ್ರಮ ಎಸಗಿದ್ದಾನೆ ಎಂದು ಮಾಹಿತಿ ನೀಡಿದ್ದರೆ ನಾನೇ ಆತನ ವಿರುದ್ಧ ಕ್ರಮಕೈಗೊಳ್ಳುತ್ತಿದ್ದೆ ಎಂದು ಅರವಿಂದ್ ಕೇಜ್ರಿವಾಲ್ ಹಲವಾರು ಬಾರಿ ಹೇಳಿದ್ದಾರೆ. ಅವರ ಈ ಹೇಳಿಕೆಗೆ ವಿರುದ್ಧವಾದ ವರದಿಯೊಂದು ಇದೀಗ ಲಭ್ಯವಾಗಿದೆ.
‘ರಾಜೇಂದ್ರ ಕುಮಾರ್ ಒಬ್ಬ ಭ್ರಷ್ಟ, ಆತನ ವಿರುದ್ಧ ತನಿಖೆ ನಡೆಸಿ ಎಂದು ನಾವು ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದೆವು. ಆದರೆ ಅವರು ಪ್ರತಿಕ್ರಿಯಿಸಲೇ ಇಲ್ಲ’ ಎಂದು ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ಇಂಡಿಯಾ ಹೇಳಿದೆ.
ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ಇಂಡಿಯಾ ಭ್ರಷ್ಟಾಚಾರದ ಕಾವಲು ಸಂಸ್ಥೆಯಾಗಿದ್ದು, ಭ್ರಷ್ಟರನ್ನು ಹಿಡಿದು ಅವರ ಮಾಹಿತಿಗಳನ್ನು ಬಹಿರಂಗಪಡಿಸುತ್ತದೆ. ರಾಜೇಂದ್ರ ಕುಮಾರ್ ವಿವಿಧ ಇಲಾಖೆಗಳಿಗೆ ಆಯ್ಕೆಯಾಗಿ ಹೋದಾಗಲೂ ಒಂದೊಂದು ಕಂಪನಿಗಳಿಗೆ ಫೇವರ್ ಮಾಡಿದ್ದಾನೆ, ಮಾತ್ರವಲ್ಲ ಕಾನೂನು ಪ್ರಕ್ರಿಯೆಯನ್ನು ನಡೆಸದೆ ಪ್ರಾಜೆಕ್ಟ್ಗಳನ್ನು ನೀಡಿದ್ದಾನೆ ಎಂದು ಇದು ಆರೋಪಿಸಿದೆ.
ಫೆಬ್ರವರಿಯಲ್ಲಿ ಸಿಎಂ ಆದ ಕೇಜ್ರಿವಾಲ್ ಈತನನ್ನು ತನ್ನ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರು. ಈತನ ಕಛೇರಿಯ ಮೇಲೆ ಮೊನ್ನೆ ಸಿಬಿಐ ದಾಳಿ ನಡೆಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.