ನವದೆಹಲಿ: ತಾನು ಭಾರತ ಪ್ರವಾಸದಲ್ಲಿದ್ದಾಗ ತನ್ನ ಕಾವಲಿಗಾಗಿ ನಿಯೋಜಿತನಾಗಿದ್ದ ಪೊಲೀಸ್ ಕಾನ್ಸ್ಸ್ಟೇಬಲ್ ಮೃತಪಟ್ಟಿದ್ದಾನೆ ಎಂದು ತಿಳಿದ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು, ಆತನ ಕುಟುಂಬಕ್ಕೆ ಹೂವಿನ ಬೊಕ್ಕೆ ಮತ್ತು ಶ್ರದ್ಧಾಂಜಲಿ ಪತ್ರವನ್ನು ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಡಿ.13ರಂದು ದೆಹಲಿಯ ಕಾಂಟ್ಟ್ ಪ್ರದೇಶದಲ್ಲಿ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ವಿರೇಂದ್ರ ಸಿಂಗ್ ಯಾದವ್ ಎಂಬ ಪೊಲೀಸ್ ಪೇದೆ ಮೃತಪಟ್ಟಿದ್ದರು. ಶಿಂಜೋ ಅಬೆ ಸಚರಿಸುವ ದಾರಿಯಲ್ಲಿ ಕಣ್ಗಾವಲು ಇರಿಸಲು ಇವರನ್ನು ಇಲ್ಲಿ ನಿಯೋಜನೆ ಮಾಡಲಾಗಿತ್ತು.
ಯಾದವ್ ಮೃತರಾದ ಸುದ್ದಿಯನ್ನು ಮಾಧ್ಯಮಗಳಿಂದ ತಿಳಿದುಕೊಂಡ ಅಬೆ, ಅವರ ಕುಟುಂಬಕ್ಕೆ ಹೂ ಮತ್ತು ಶ್ರದ್ಧಾಂಜಲಿ ಪ್ರತವನ್ನು ಕಳುಹಿಸಿಕೊಟ್ಟಿದ್ದಾರೆ.
ಯಾದವ್ರಂತಹ ನೂರಾರು ಕರ್ತವ್ಯ ನಿರತ ಗಾರ್ಡ್ಗಳ ಸಾವನ್ನು ನಮ್ಮ ವಿವಿಐಪಿಗಳು ಒಂದು ಸಾಮಾನ್ಯ ವಿಷಯವೆಂದೇ ಪರಿಗಣಿಸುತ್ತಾರೆ. ಅಂತಹವರು ಅಬೆಯವರನ್ನು ನೋಡಿ ಕಲಿಯಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.