ನವದೆಹಲಿ: ಅಂತರ್ಜಾಲ ದೈತ್ಯ ಗೂಗಲ್ನ ಸಿಇಓ ಸುಂದರ್ ಪಿಚೈ ಅವರು ಬುಧವಾರ ಭಾರತಕ್ಕೆ ಆಗಮಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿದ ಅವರು, ‘ಭಾರತದ ಬಹುತೇಕರನ್ನು ಇಂಟರ್ನೆಟ್ಗೆ ಸೇರಿಸುವ ಗುರಿ ಹೊಂದಲಾಗಿದ್ದು, ಹೈದರಾಬಾದ್ನಲ್ಲಿ ಹೊಸ ಕ್ಯಾಂಪಸ್ ನಿರ್ಮಿಸಲಿದ್ದೇವೆ ’ ಎಂದರು.
‘ಇಂಟರ್ನೆಟ್ ಎಲ್ಲರಿಗೂ ತಲುಪುವಂತೆ ಮಾಡುವುದು ನಮ್ಮ ಗುರಿ, ಹೀಗಾಗಿ ರೈಲ್ಟೆಲ್ ಮೂಲಕ ಭಾರತದ 400 ರೈಲ್ವೇ ಸ್ಟೇಶನ್ಗಳಿಗೆ ವೈಫೈ ನೀಡಲು ಮುಂದಾಗಿದ್ದೇವೆ. 100 ಸ್ಟೇಶನ್ಗಳು 2016ರೊಳಗೆ ಆನ್ಲೈನ್ ವ್ಯಾಪ್ತಿಗೆ ಬರಲಿದೆ. ಜನವರಿಯೊಳಗೆ ಮುಂಬಯಿ ಸೆಂಟ್ರಲ್ ಸ್ಟೇಶನ್ ಆನ್ಲೈನ್ಗೆ ಒಳಪಡಲಿದೆ’ ಎಂದರು.
ಭಾರತದಲ್ಲಿ ಗೂಗಲ್ ವಿಸ್ತರಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಬೆಂಗಳೂರು ಮತ್ತು ಹೈದರಾಬಾದ್ನಲ್ಲಿನ ನಮ್ಮ ಎಂಜಿನಿಯರಿಂಗ್ ಬಂಡವಾಳವನ್ನು ಉದ್ದೀಪನಗೊಳಿಸಲಿ ಎಂದರು.
ಕಳೆದ ಸೆಪ್ಟಂಬರ್ನಲ್ಲಿ ಕ್ಯಾಲಿಫೋರ್ನಿಯಾದಲ್ಲಿನ ಗೂಗಲ್ ಹೆಡ್ಕ್ವಾಟರ್ಗೆ ಭೇಟಿ ಕೊಟ್ಟ ಸಂದರ್ಭಲ್ಲೇ ಪಿಚೈ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಭರವಸೆಯನ್ನು ನೀಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.