ಜೈಪುರ: ರಾಜಸ್ಥಾನ ಗಡಿ ಭದ್ರತಾ ಪಡೆಯು ತನ್ನ ಸಿಬ್ಬಂದಿಗಳಿಗೆ ಹೊಸ ಆರೋಗ್ಯ ಸೂಕ್ತಿಯೊಂದನ್ನು ಆರಂಭಿಸಿದೆ. ಆರೋಗ್ಯವಂತರಾಗುವುದರೊಂದಿಗೆ ತಮಗಿಷ್ಟವಾದ ಪದವಿಯನ್ನು ಆಯ್ಕೆ ಮಾಡುವ ಅವಕಾಶ ನೀಡಿದೆ.
ಭಧ್ರತಾ ಸಿಬ್ಬಂದಿಗಳು ತಮ್ಮ ದೇಹ ಪ್ರಕೃತಿಗೆ ಅನುಗುಣವಾಗಿ ಪರಿಪೂರ್ಣ ತೂಕ ಹೊಂದುವ ಮೂಲಕ ತಮ್ಮ ಆಯ್ಕೆಯ ಪದವಿಗೆ ವರ್ಗಾವಣೆ ಪಡೆಯಬಹುದು ಎಂದು ಗಡಿ ಭದ್ರತಾ ಪಡೆ ಹೇಳಿದೆ. ಹೀಗೆ ತಮ್ಮ ದೇಹ ಸಾಮರ್ಥ್ಯ ಹೆಚ್ಚಿಸಿದವರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ನೀಡಲಾಗುವುದು. ಇದು ಅವರ ವಾರ್ಷಿಕ ವರದಿಯಲ್ಲಿ ಹೆಚ್ಚಿನ ಪ್ರಾಶಸ್ತ್ಯ ಪಡೆಯಲಿದ್ದು, ಉನ್ನತ ಸ್ಥಾನಕ್ಕೆ ಬಡ್ತಿ ಪಡೆಯಲಿದ್ದಾರೆ ಎಂದು ತಿಳಿಸಿದೆ.
ಅಧಿಕೃತ ವರದಿಗಳ ಪ್ರಕಾರ ಮಾಸಿಕ 7-8 ಬಿಎಸ್ಎಫ್ ಸಿಬ್ಬಂದಿಗಳು, ಅಧಿಕಾರಿಗಳು, ಪೇದೆಗಳು ಹೃದಯ ವೈಫಲ್ಯದಿಂದ ಬಳಲುತ್ತಿದ್ದಾರೆ. ರಾಜಸ್ಥಾನದ ಬಿಎಸ್ಎಫ್ ಸಿಬ್ಬಂದಿಗಳಲ್ಲಿ ಶೇ.6ರಷ್ಟು ಮಂದಿ ಬೊಜ್ಜಿನಿಂದ ಬಳಲುತ್ತರುವುದು ಕಂಡು ಬಂದಿದೆ. ಹೀಗಾಗಿ ಸಿಬ್ಬಂದಿಗಳ ಕಾಳಜಿ ವಹಿಸುವ ನಿಟ್ಟಿನಲ್ಲಿ ಈ ನಿಯಮ ಜಾರಿಗೊಳಿಸಲಾಗಿದೆ. ಪರಿಷ್ಕೃತ ಆಹಾರ ಪದ್ಧತಿ ಮತ್ತು ಫಿಟ್ನೆಸ್ನಿಂದ ಆರೋಗ್ಯದಲ್ಲಿ ವೃದ್ಧಿಯಾಗಿದೆ ಎಂದು ಹೇಳಲಾಗಿದೆ.
ತಮ್ಮ ಸಾಮಾನ್ಯ ದೇಹ ತೂಕಕ್ಕಿಂತ ಶೇ.20ರಷ್ಟು ಅಧಿಕ ತೂಕ ಹೊಂದಿದವರಿಗೆ ಈ ಉಪಕ್ರಮ ಅನ್ವಯವಾಗಲಿದೆ. ಕಳೆದ 10 ತಿಂಗಳಲ್ಲಿ ಸುಮಾರು 250 ಸಿಬ್ಬಂದಿಗಳು ತಮ್ಮ ಭೌತಿಕ ದ್ರವ್ಯರಾಶಿ ಸೂಚಿ ಮತ್ತು ದೇಹದ ತೂಕದಲ್ಲಿ ಅತ್ಯಧಿಕ 12ರಿಂದ 15 ಕೆ.ಜಿ. ತೂಕ ಇಳಿಸಿದ್ದಾರೆ ಎನ್ನಲಾಗಿದೆ.
ಈ ಉಪಕ್ರಮವು ಎಸಿಆರ್ ವಿಭಾಗದ ಸಿಬ್ಬಂದಿಗಳಿಗೂ ಅನ್ವಯವಾಗಲಿದ್ದು, ಅವರ ಉನ್ನತ ಶ್ರೇಣಿಯ ಬಡ್ತಿಗೆ ಅನುಕೂಲವಾಗಲಿದೆ ಎಂದು ಡಿಐಜಿ ರವಿ ಗಾಂಧಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.