ನವದೆಹಲಿ: ದೇಶವನ್ನೇ ತಲ್ಲಣಗೊಳಿಸಿದ್ದ ನಿರ್ಭಯಾ ಗ್ಯಾಂಗ್ರೇಪ್ ಪ್ರಕರಣದ ಬಾಲಪರಾಧಿ ದೆಹಲಿ ಹೈಕೋರ್ಟ್ ಮಧ್ಯ ಪ್ರವೇಶದೇ ಹೋದರೆ ಡಿ.೨20ರಂದು ಬಿಡುಗಡೆಗೊಳ್ಳುವುದು ನಿಶ್ಚಿತ.
ಆತನ ಬಿಡುಗಡೆಯನ್ನು ನಿರ್ಭಯಾ ಪೋಷಕರು ಸೇರಿದಂತೆ ದೇಶದ ಯಾವೊಬ್ಬ ನಾಗರಿಕನೂ ಬಯಸುತ್ತಿಲ್ಲ. ಆದರೂ ಒಂದು ವೇಳೆ ಆತ ಬಿಡುಗಡೆಗೊಂಡರೆ ಮುಂದಿನ ಆತನ ಜೀವನ ಹೇಗಿರಬಹುದು? ಈ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.
ಆತ ಬಿಡುಗಡೆಗೊಂಡರೂ ಈ ಸಮಾಜ ಆತನನ್ನು ಒಪ್ಪಿಕೊಳ್ಳುವುದಲ್ಲ, ಆತನಿಗೆ ಉದ್ಯೋಗ ದೊರಕುವುದು ಕಷ್ಟಸಾಧ್ಯ. ಹೀಗಾಗಿಯೇ ದೆಹಲಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆತನಿಗೆ ಪರಿಹಾರ ಯೋಜನೆಯನ್ನು ರೂಪಿಸಿದೆ, ಅದರಂತೆ ಆತನ ಮುಂದಿನ ಬದುಕಿಗೆ ಸಹಾಯವಾಗುವಂತೆ ಒಂದು ಟೈಲರಿಂಗ್ ಮೆಶನ್ ನೀಡಲಿದೆ, ಅಲಲ್ದೇ 11 ಸಾವಿರ ಹಣ ನೀಡಲಿದೆ ಎನ್ನಲಾಗಿದೆ.
ರೇಪ್ ನಡೆಸುವ ವೇಳೆ 18 ವರ್ಷ ಪೂರೈಸದೇ ಇದ್ದ ಈ ಅಪರಾಧಿಗೆ ಈಗ 23 ವರ್ಷ, ಕ್ರೂರ ಅಪರಾಧ ಎಸಗಿದ ಮೂರೇ ವರ್ಷದಲ್ಲಿ ಬಿಡುಗಡೆಗೊಳ್ಳುವ ಭಾಗ್ಯ ಆತನಿಗೆ ಸಿಕ್ಕಿದೆ. ಆದರೆ ಬಡ ಕುಟುಂಬದಿಂದ ಬಂದಿರುವ ಆತನ ತಂದೆ ಮಾನಸಿಕ ಅಸ್ವಸ್ಥ ಮತ್ತು ತಾಯಿ ಅನಾರೋಗ್ಯ ಪೀಡಿತೆ. ಆತನ ತಮ್ಮಂದಿಗರು ತೀರಾ ಸಣ್ಣವರು. ಜೈಲಿನಿಂದ ಹೊರಬಂದ ಈತನನ್ನು ಸಾಕುವ ಸ್ಥಿತಿಯಲ್ಲಿ ಅವರಿಲ್ಲ, ಹೀಗಾಗಿ ಈತನಿಗೆ ಉದ್ಯೋಗ ಮಾಡುವುದು ಅನಿವಾರ್ಯ. ಹೀಗಾಗಿ ಇಲಾಖೆ ಆತನಿಗಾಗಿ ಪರಿಹಾರ ಯೋಜನೆ ರೂಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.