ಮುಂಬಯಿ: ಮಹಾರಾಷ್ಟ್ರದಲ್ಲಿನ ಡ್ಯಾನ್ಸ್ ಬಾರ್ನೊಳಗಿನ ದೃಶ್ಯವಾಳಿಗಳು ಇನ್ನು ಮುಂದೆ ಪೊಲೀಸ್ ಸ್ಟೇಶನ್ಗಳಲ್ಲಿ ನೇರ ಪ್ರಸಾರಗೊಳ್ಳುವ ಸಾಧ್ಯತೆ ಇದೆ.
ಡ್ಯಾನ್ಸ್ ಬಾರ್ಗಳು ರೀಓಪನ್ ಆಗಲು ಕೆಲವೊಂದು ನೀತಿ, ನಿಯಮಾವಳಿಗಳನ್ನು ರೂಪಿಸಲು ದೇವೇಂದ್ರ ಫಡ್ನವಿಸ್ ಅವರ ಸರ್ಕಾರ ನಿರ್ಧರಿಸಿದೆ. ಈಗಾಗಲೇ ನಿಯಮಾವಳಿಗಳ ಕರಡು ಪ್ರತಿಯನ್ನು ಅದನ್ನು ರಚಿಸಿದೆ ಎನ್ನಲಾಗಿದೆ.
ಪ್ರತಿಯೊಂದು ಡ್ಯಾನ್ಸ್ಬಾರ್ಗಳು ಸಿಸಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯ ಮತ್ತು ಅದರ ನೇರ ದೃಶ್ಯಗಳನ್ನು ಹತ್ತಿರದ ಪೊಲೀಸ್ ಸ್ಟೇಶನ್ಗೆ ಕಳುಹಿಸಿಕೊಡಬೇಕು ಎಂಬ ಅಂಶ ಕರಡು ಪ್ರತಿಯಲ್ಲಿದೆ ಎನ್ನಲಾಗಿದೆ.
ಅಲ್ಲದೇ ಡ್ಯಾನ್ಸ್ ಗರ್ಲ್ ಮತ್ತು ಆಡಿಯನ್ಸ್ ನಡುವೆ ಅಂತರ ಕಾಯ್ದುಕೊಳ್ಳಬೇಕು, ವೇದಿಕೆಗೆ ಬಂದು ಪ್ರೇಕ್ಷಕರು ಡ್ಯಾನ್ಸ್ ಮಾಡಬಾರದು. ಕುಡಿಯಬಹುದು ಆದರೆ ಮೈಮೇಲೆ ಹಣ ಎರಚುವಂತಿಲ್ಲ.
ಡ್ಯಾನ್ಸ್ ಬಾರ್ಗಳ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ಇತ್ತೀಚಿಗಷ್ಟೇ ಸುಪ್ರೀಂಕೋರ್ಟ್ ತೆರವುಗೊಳಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.