ನವದೆಹಲಿ: ಐಪಿಎಲ್ನ ನೂತನ ಫ್ರಾಂಚೈಸಿಗಳಾದ ಪುಣೆ ಮತ್ತು ರಾಜ್ಕೋಟ್ ತಂಡಗಳು ಮಂಗಳವಾರ ಹರಾಜು ಪ್ರಕ್ರಿಯೆಯಲ್ಲಿ ತೊಡಗಿವೆ.
ಸಂಜೀವ್ ಗೋಯಂಕ್ ಮಾಲೀಕತ್ವದ ಪುಣೆ ತಂಡ ಧೋನಿಯನ್ನು 12.5 ಕೋಟಿ ರೂಪಾಯಿಗೆ ಮತ್ತು ಸುರೇರ್ಶ ರೈನಾ ಅವರನ್ನು ರಾಜ್ ಕೋಟ್ ತಂಡ 12.5 ಕೋಟಿ ನೀಡಿ ಖರೀದಿಸಿದೆ.
ಹರಾಜಿನಲ್ಲಿ ಒಟ್ಟು 50 ಆಟಗಾರರು ಇದ್ದು, ಎರಡು ಫ್ರಾಂಚೈಸಿಗಳು ತಲಾ ಐವರನ್ನು ಖರೀದಿ ಮಾಡಲಿದೆ.
ಪುಣೆ ತಂಡೆ ಅಜಿಂಕ್ಯಾ ರಹಾನೆಯವರನ್ನು 9.5 ಕೋಟಿ, ಆರ್.ಅಶ್ವಿನ್ ಅವರನ್ನು 7.5 ಕೋಟಿ, ಸ್ವಿವರ್ ಸ್ಮಿತ್ ಅವರನ್ನು 5.5 ಕೋಟಿ, ಡುಪ್ಲೆಸಿಸ್ ಅವರನ್ನು 4 ಕೋಟಿ ರೂಪಾಯಿ ನೀಡಿ ಖರೀದಿಸಿದೆ.
ರಾಜ್ಕೋಟ್ ತಂಡ ರವೀಂದ್ರ ಜಡೇಜ ಅವರನ್ನು 6.5 ಕೋಟಿ, ಬ್ರೆಂಡನ್ ಮೆಕ್ಲಮ್ ಅವರನ್ನು 7.5 ಕೋಟಿ, ಜೇಮ್ಸ್ ಫುಲ್ಕನರ್ ಅವರನ್ನು 5.5 ಕೋಟಿ, ಡ್ವೇಯ್ನ್ ಬ್ರಾವೋ ಅವರನ್ನು 4 ಕೋಟಿ ನೀಡಿ ಖರೀದಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್ನಿಂದ ಈ ವರ್ಷ ನಿಷೇಧಕ್ಕೊಳಟ್ಟ ಕಾರಣ ಈ ಎರಡು ತಂಡಗಳನ್ನು ಸೇರ್ಪಡೆಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.