ಟೊರಾಂಟೊ: ಕೆನಡಾವು ಅಣು ಶಕ್ತಿ ಉತ್ಪಾದನಾ ಇಂಧನ ತಯಾರಿಕೆಗೆ ಸಹಾಯಕವಾಗುವಂತೆ ಮೊದಲ ಹಂತದಲ್ಲಿ ಭಾರತಕ್ಕೆ ಯುರೇನಿಯಂ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಭಾರತ ಮತ್ತು ಕೆನಡಾ ನಡುವೆ ಐದು ವರ್ಷಗಳ ಒಪ್ಪಂದಕ್ಕೆ ಕಳೆದ ಎಪ್ರಿಲ್ನಲ್ಲಿ ಸಹಿ ಹಾಕಲಾಗಿದ್ದು, ಯುರೇನಿಯಂ ಸರಕು ಭಾರತಕ್ಕೆ ತಲುಪಿದೆ. ಇದು ಕೆನಡಾದ ಕ್ಯಾಮೆಕೋದ ಮೊದಲ ಯುರೇನಿಯಂ ಪೂರೈಕೆಯಾಗಿದೆ. ಭಾರತ ಮತ್ತು ಕೆನಡಾ ನಡುವೆ ಪರಮಾಣು ಸಹಕಾರ ಒಪ್ಪಂದ ಜಾರಿಗೆ ಬಂದ ಬಳಿಕ ಕ್ಯಾಮಕೊ ಯುರೇನಿಯಂ ಪೂರೈಕೆ ಒಪ್ಪಂದಕ್ಕೆ ಭಾರತದೊಂದಿಗೆ ಸಹಿ ಹಾಕಿತ್ತು.
ಭಾರತದ ಅಣು ಶಕ್ತಿ ಇಲಾಖೆಗೆ ಕೆನಡಾ ಸುಮಾರು 7.1 ಪೌಂಡ್ (2,730 ಟನ್) ಯುರೇನಿಯಂ ಸರಬರಾಜು ಮಾಡಲಿದ್ದು, ಇದರ ಅಂದಾಜು ವೆಚ್ಚ 262 ಮಿಲಿಯನ್ ಡಾಲರ್ ಆಗಲಿದೆ ಎಂದು ಕೆನಡಾ ಸರ್ಕಾರ ತಿಳಿಸಿದೆ.
ಭಾರತದಲ್ಲಿ ಪ್ರಸ್ತುತ 21 ಅಣು ಉತ್ಪಾದನಾ ಕೇಂದ್ರಗಳು ಕಾರ್ಯಾಚರಿಸುತ್ತಿದ್ದು, ಮುಂದಿನ 4 ವರ್ಷಗಳಲ್ಲಿ ನಿರ್ಮಾಣ ಹಂತದಲ್ಲಿರುವ ಆರು ಅಣು ಕೇಂದ್ರಗಳನ್ನು ಪ್ರಾರಂಭಿಸಲಿದೆ ಎಂದು ಹೇಳಲಾಗಿದೆ. ಭಾರತವು 2032ರ ಒಳಗೆ ಅಣು ಉತ್ಪಾದನಾ ಸಾಮರ್ಥ್ಯವನ್ನು 5800 ಮೆ.ವ್ಯಾ.ನಿಂದ 27,500 ಮೆ.ವ್ಯಾ.ಗೆ ಏರಿಸುವ ಗುರಿ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.