ನವದೆಹಲಿ: ಗಂಗಾ ನದಿಯ ಮೇಲ್ಮೈ ಶುದ್ಧೀಕರಣ ಕಾರ್ಯವು ಮುಂದಿನ ವರ್ಷದಿಂದ ಪ್ರಾರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಕ್ಲೀನ್ ಗಂಗಾ ಫಂಡ್ಗೆ ಸಾರ್ವಜನಿಕರು, ವಿದೇಶದಲ್ಲಿ ನೆಲೆಸಿರುವ ಭಾರತೀಯರು ತಮ್ಮಿಂದಾದ ಕೊಡುಗೆಗಳನ್ನು ನೀಡುವಂತೆ ಕೇಂದ್ರ ಸರ್ಕಾರ ಮನವಿ ಮಾಡಿಕೊಂಡಿದೆ.
ಇದುವರೆಗೆ ರೂ.88 ಕೋಟಿಯನ್ನು ಗಂಗಾ ಶುದ್ಧೀಕರಣ ಕಾರ್ಯಕ್ಕಾಗಿ ಸರ್ಕಾರ ಜನರಿಂದ ಸ್ವೀಕಾರ ಮಾಡಿದೆ. ಆದರೆ ಶುದ್ದೀಕರಣ ಕಾರ್ಯಕ್ಕೆ ಇನ್ನೂ ಬಹಳಷ್ಟು ಹಣದ ಅವಶ್ಯಕತೆ ಇದೆ.
ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ 2016ರ ಜನವರಿಯಿಂದ ಶುದ್ಧೀಕರಣ ಕಾರ್ಯ ನಡೆಯಲಿದೆ. ಒಂದು ವರ್ಷಗಳ ಹಿಂದೆ ಕ್ಲೀನ್ ಗಂಗಾ ಫಂಡ್ ಸ್ಥಾಪನೆಯಾಗಿದೆ.
‘ಗಂಗಾ ಶುದ್ಧೀಕರಣಕ್ಕೆ ಕ್ರಿಯಾ ಯೋಜನೆ ಸಿದ್ಧವಾಗಿದೆ, ಸದ್ಯದಲ್ಲೇ ಕಾರ್ಯವನ್ನು ಆರಂಭ ಮಾಡಲಿದ್ದೇವೆ. ಇದಕ್ಕಾಗಿ ಅನುದಾನಗಳ ಅಗತ್ಯವಿದೆ. ಹೀಗಾಗಿ ಕ್ಲೀನ್ ಗಂಗಾ ಫಂಡ್ಗೆ ಅನುದಾನ ನೀಡುವಂತೆ ಸಾರ್ವಜನಿಕರಲ್ಲಿ, ವಿದೇಶದಲ್ಲಿರುವ ಭಾರತಿಯರಲ್ಲಿ ಕೇಳಿಕೊಳ್ಳುತ್ತೇವೆ. ದಾನಿಗಳಿಗೆ ತೆರಿಗೆ ವಿನಾಯಿತಿ ನೀಡುತ್ತೇವೆ’ ಎಂದು ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿ ಶೇಖರ್ ತಿಳಿಸಿದ್ದಾರೆ.
ಇದುವರೆಗೆ ಸ್ವೀಕರಿಸಿದ ಅನುದಾನದಲ್ಲಿ ಬಹುಪಾಲು ಖಾಸಗಿ ವಲಯದಿಂದ ಬಂದಿದೆ, ಎನ್ಆರ್ಐ ಮತ್ತು ಸಾಮಾನ್ಯ ಜನರಿಂದ ಅತಿ ಕಡಿಮೆ ಪ್ರಮಾಣದ ಹಣ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.