ವಾಷಿಂಗ್ಟನ್: 1999ರ ಕಾರ್ಗಿಲ್ ಯುದ್ಧದ ಸಂದರ್ಭ ಭಾರತದ ಕೈಯಲ್ಲಿ ತನ್ನ ಸೇನೆ ಹೀನಾಯವಾಗಿ ಸೋತ ಸೇಡನ್ನು ತೀರಿಸುವ ಸಲುವಾಗಿ ಪಾಕಿಸ್ಥಾನ ಭಾರತದ ವಿರುದ್ಧ ಅಣ್ವಸ್ತ್ರಗಳನ್ನು ಬಳಸಲು ಸಜ್ಜಾಗಿತ್ತು, ಈ ಬಗ್ಗೆ ಸಿಐಎ ಅಂದಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರಿಗೆ ಎಚ್ಚರಿಕೆ ನೀಡಿತ್ತು ಎಂದು ವೈಟ್ಹೌಸ್ನ ಮಾಜಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಧಾನಿ ನವಾಝ್ ಶರೀಫ್ ಅವರನ್ನು ಭೇಟಿಯಾಗುವುದರಲ್ಲಿದ್ದ ಕ್ಲಿಂಟನ್ ಅವರಿಗೆ ಪಾಕ್ ಅಣ್ವಸ್ತ್ರ ಪ್ರಯೋಗಿಸುವ ಸಾಧ್ಯತೆ ಇದೆ ಎಂಬ ರಹಸ್ಯ ಮಾಹಿತಿಯನ್ನು ಸಿಐಎ ಜುಲೈ 4, 1999ರಂದು ನೀಡಿತ್ತು.
ಭಾರತದ ವಿರುದ್ಧ ಸಮರ ಸಾರಿದ ಅಂದಿನ ಸೇನಾಧಿಕಾರಿ ಪರ್ವೇಝ್ ಮುಶರಫ್ ಅವರ ಅನರ್ಥ ಸಾಹಸದಿಂದಾಗಿ ಜಾಗತಿಕ ಮಟ್ಟದಲ್ಲಿ ಪಾಕಿಸ್ಥಾನ ಅವಮಾನವನ್ನು ಎದುರಿಸುವುದು ಖಚಿತವಾಗುತ್ತಿದ್ದಂತೆ ಯುದ್ಧವನ್ನು ಅಂತ್ಯಗೊಳಿಸುವ ಸಲುವಾಗಿ ಕ್ಲಿಂಟನ್ ಅವರ ಸಹಾಯವನ್ನು ಪಡೆಯಲು ನವಾಝ್ ವಾಷಿಂಗ್ಟನ್ಗೆ ದೌಡಾಯಿಸಿದ್ದರು.
ತನ್ನ ಸೇನೆಯನ್ನು ವಾಪಾಸ್ ಪಡೆಯುವಂತೆ ನವಾಝ್ಗೆ ಕ್ಲಿಂಟನ್ ಸಲಹೆ ನೀಡಿದರು. ಅಮೆರಿಕ ಅಧ್ಯಕ್ಷರ ಸಲಹೆಯಂತೆ ಪಾಕಿಸ್ಥಾನ ಮಣಿದು ತನ್ನ ಸೇನೆಯನ್ನು ವಾಪಾಸ್ ಪಡೆದುಕೊಂಡಿತು ಎಂದು ಮಾಜಿ ಅಧಿಕಾರಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.