ನವದೆಹಲಿ: ಮಾಜಿ ಪ್ರಧಾನಿ ಜವಹಾರ್ ಲಾಲ್ ನೆಹರೂ ಅವರು ಸ್ವಾತಂತ್ರ್ಯ ಹೋರಾಟಗಾರ ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದ ಮೇಲೆ ಸುಮಾರು 20 ವರ್ಷಗಳ ಕಾಲ ಬೇಹುಗಾರಿಕೆ ನಡೆಸಿದ್ದರು ಎಂಬ ಕುತೂಹಲಕಾರಿ ಸಂಗತಿಯೊಂದು ಬಹಿರಂಗವಾಗಿದೆ.
ಈ ಬಗೆಗಿನ ಗುಪ್ತಚರ ಇಲಾಖೆಯ ರಹಸ್ಯ ಮಾಹಿತಿಗಳು ಸೋರಿಕೆಯಾಗಿದೆ. ಇದರಲ್ಲಿ ನೆಹರೂ 1948ರಿಂದ 1968ರವರೆಗೆ ನೇತಾಜೀ ಕುಟುಂಬದ ಮೇಲೆ ಬೇಹುಗಾರಿಕೆ ನಡೆಸಿದ್ದರು ಎಂಬ ಸಂಹತಿ ಬಹಿರಂಗವಾಗಿದೆ. ನೇತಾಜೀ ಕುಟುಂಬದ ವಿದೇಶ ಮತ್ತು ದೇಶದೊಳಗಿನ ಪ್ರಯಾಣದ ಬಗ್ಗೆ ನೆಹರೂ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಕುಟುಂಬ ಸದಸ್ಯರು ಯಾರನ್ನು ಭೇಟಿಯಾಗುತ್ತಿದ್ದರು, ಏನು ಮಾತುಕತೆ ನಡೆಸುತ್ತಿದ್ದರು. ಅವರಿಗೆ ಬರುತ್ತಿದ್ದ ಪತ್ರ ಮುಂತಾದುವುಗಳ ಬಗ್ಗೆ ಏಜೆನ್ಸಿಯ ಮೂಲಕ ಬೇಹುಗಾರಿಕೆ ನಡೆಸಲಾಗಿತ್ತು ಎನ್ನಲಾಗಿದೆ.
ತನಗೆ ಹಾಗೂ ಕಾಂಗ್ರೆಸ್ಗೆ ನೇತಾಜೀ ಕುಟುಂಬ ದೊಡ್ಡ ಸವಾಲಾಗಿ ಪರಿಣಮಿಸಬಹುದು ಎಂಬ ಕಾರಣಕ್ಕೆ ಬೇಹುಗಾರಿಕೆ ನಡೆಸಲಾಗುತ್ತಿತ್ತು ಎನ್ನಲಾಗಿದೆ.
‘ನೆಹರೂ ನೇತಾಜೀ ಕುಟುಂಬದ ಮೇಲೆ ಬೇಹುಗಾರಿಕೆ ನಡೆಸಿದ್ದರು ಎಂಬುದನ್ನು ನಂಬಲು ಸಾಧ್ಯವಿಲ್ಲ. ಈ ವರದಿ ನಿಜವೇ ಆಗಿದ್ದರೆ ಇದೊಂದು ದುರಾದೃಷ್ಟಕರ ಸಂಗತಿ’ ಎಂದು ಜೆಡಿಯು ಮುಖಂಡ ಕೆಸಿ ತ್ಯಾಗಿ ತಿಳಿಸಿದ್ದಾರೆ.
‘ನೆಹರೂ ನತಾಜೀ ಮೇಲೆ ಬೇಹುಗಾರಿಕೆ ಮಾಡಬಹುದು ಎಂಬ ಕಲ್ಪನೆ ನಮಗಿರಲಿಲ್ಲ. ಇದು ನಮಗೆ ಆಘಾತ ತಂದಿದೆ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು’ ಎಂದು ನೇತಾಜೀ ಮೊಮ್ಮಗ ಚಂದ್ರ ಕುಮಾರ್ ಒತ್ತಾಯಿಸಿದ್ದಾರೆ.
ನೇತಾಜೀ ಮೃತರಾಗಿದ್ದಾರೆಯೇ ಇಲ್ಲವೇ ಎಂಬುದು ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿದಿಲ್ಲ. ಅಕ್ಬರ್ ಸಾಯಿ ಬೋಸ್ ಅವರು ಒಬ್ಬ ಧೀಮಂತ ನಾಯಕರಾಗಿದ್ದರು. ಕಾಂಗ್ರೆಸ್ಗೆ ಅವರು ಸವಾಲೊಡ್ಡುವ ಸಂಭವವಿತ್ತು. 1957ಚುನಾವಣೆಯಲ್ಲಿ ಅವರು ನೆಹರೂಗೆ ಕಂಟಕವಾಗುವ ಸಾಧ್ಯತೆ ಇತ್ತು ಎಂದು ಬಿಜೆಪಿಯ ಎಂಜೆ ಅಕ್ಬರ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.