ಪ್ಯಾರೀಸ್: ಸ್ವಚ್ಚ ಇಂಧನ ಮತ್ತು ಇಂಗಾಲದ ಹೊರಸೂಸುವಿಕೆಯ ತಡೆಗಟ್ಟುವಿಕೆಗಾಗಿ ಭಾರತ ಸ್ಪಷ್ಟ ಗುರಿಗಳನ್ನು ಇಟ್ಟುಕೊಂಡಿದೆ. ಹವಮಾನ ವೈಪರೀತ್ಯ ಎಂಬುದು ಜಾಗತಿಕ ಸಮಸ್ಯೆಯಾಗಿದ್ದು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹವಮಾನ ವೈಪರೀತ್ಯದ ಸವಾಲನ್ನು ಎದುರಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಪ್ಯಾರೀಸ್ನಲ್ಲಿ ನಡೆಯುತ್ತಿರುವ ಹವಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನ ಏರಿಕೆ ಕುರಿತ ವಿಶ್ವಸಂಸ್ಥೆಯ 21ನೇ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹವಮಾನ ವೈಪರೀತ್ಯದ ಬಗೆಗೆ ಮುಂದುವರೆದ ದೇಶಗಳು ಆಶಾದಾಯಕ ಗುರಿಗಳನ್ನು ಇಟ್ಟುಕೊಂಡು ಅವುಗಳನ್ನು ತಲುಪುವಲ್ಲಿ ಯಶಸ್ವಿಯಾಗುತ್ತವೆ ಎಂಬ ವಿಶ್ವಾಸ ನಮಗಿದೆ. 2020ರ ವೇಳೆಗೆ ಈ ದೇಶಗಳು ಇಂಗಾಲದ ಹೊರಸೂಸುವಿಕೆ ತಗ್ಗಿಸುವಿಕೆ ಮತ್ತು ರೂಪಾಂತರಕ್ಕೆ 100 ಬಿಲಿಯನ್ ಡಾಲರ್ ವಾರ್ಷಿಕ ಬಳಕೆ ಮಾಡುವುದನ್ನು ಎದುರು ನೋಡುತ್ತೇವೆ ಎಂದರು.
ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದ್ದು, 1.25 ಬಿಲಿಯನ್ ಜನರ ಆಶಯಗಳನ್ನು ಈಡೇರಿಸಲು ಅದು ಶೀಘ್ರಗತಿಯಲ್ಲಿ ಪ್ರಗತಿ ಹೊಂದಬೇಕಿದೆ. ಹವಮಾನ ನ್ಯಾಯ ಎಂದರೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಪ್ರಗತಿ ಹೊಂದಲು ಬೇಕಾಗುವಷ್ಟು ಅವಕಾಶಗಳನ್ನು ಕಲ್ಪಿಸುವುದು. ಅವುಗಳಿಗೆ ವಿಧಿಸಿರುವ ನಿರ್ಬಂಧಗಳನ್ನು ತೊಡೆದು ಹಾಕುವುದು ಎಂದರು.
ಫ್ರಾನ್ಸ್ ರಾಜಧಾನಿ ಪ್ಯಾರೀಸ್ನಲ್ಲಿ ಸೋಮವಾರದಿಂದ ಶೃಂಗ ಸಭೆ ಆರಂಭಗೊಂಡಿದ್ದು, ಒಟ್ಟು 12 ದಿನಗಳ ಕಾಲ ಮುಂದುವರೆಯಲಿದೆ. ಜಗತ್ತಿನ150 ದೇಶಗಳು ಇದರಲ್ಲಿ ಪಾಲ್ಗೊಳ್ಳಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.