ಮೆಕ್ಸಿಕೊ ಸಿಟಿ: ಮಾದಕ ದ್ರವ್ಯ ಮಾರಾಟ ವಿಚಾರದಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, ಇವರ ಕತ್ತು ಸೀಳಿರುವ ಸ್ಥಿತಿಯಲ್ಲಿ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.
ಇವರ ಕೈ-ಕಾಲುಗಳನ್ನು ಕಟ್ಟಿ ಹಾಕಿರುವ ಸ್ಥಿತಿಯಲಲಿದ್ದು, ನಿಷೇಧಿತ ವಾಹನವೊಂದರ ಸಮೀಪ ಮೃತರ ದೇಹಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ. ತಮ್ಮ ನಿತ್ಯ ಕೆಲಸಕ್ಕೆಂದು ತೆರಳುತ್ತಿದ್ದ ಕೃಷಿಕರ ತಂಡವೊಂದು ಕೊಸೊಲಾಪಾ ಪಟ್ಟಣದ ಸಮೀಪ ಈ ಮೃತ ದೇಹಗಳನ್ನು ಗಮನಿಸಿದ್ದು, ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.
ಮೆಕ್ಸಿಕೊದ ಒಕ್ಸಾಕ ರಾಜ್ಯದಲ್ಲಿ ಮಾದಕ ವಸ್ತು ಮಾರಾಟದ ನಂಟು ಹೊಂದಿರುವ ಔಷಧ ಒಕ್ಕೂಟಗಳು ಅಮೇರಿಕಕ್ಕೆ ಔಷಧ ವ್ಯಾಪಾರ ಮಾರ್ಗಗಳ ನಿಯಂತ್ರದಲ್ಲಿ ಒಕ್ಕೂಟಗಳ ನಡುವೆ ಹಿಂಸಾಚಾರ ಸಂಭವಿಸಿತ್ತು ಎನ್ನಲಾಗಿದೆ.
ಮಾದಕವಸ್ತು ಸಂಬಂಧಿತ ಹಿಂಸಾಚಾರದಲ್ಲಿ 2006ರ ಬಳಿಕ ರಾಷ್ಟ್ರವ್ಯಾಪಿ 1000,000ಕ್ಕೂ ಅಧಿಕ ಮಂದಿ ಸಾವನ್ನಿಪ್ಪಿರುವ ಇಲ್ಲವೇ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.