ಪುಟ್ರಜಯ: ಭಾರತ ಹಾಗೂ ಮಲೇಷ್ಯಾ ಇಂದು ದ್ವಿಪಕ್ಷೀಯ ಸಹಭಾಗಿತ್ವವನ್ನು ಬಲಗೊಳಿಸುವ ಪ್ರಯತ್ನಗಳ ಭಾಗವಾಗಿ ಸೈಬರ್ ಭದ್ರತೆ ಸೇರಿದಂತೆ ಮೂರು ಒಪ್ಪಂದಗಳಿಗೆ ಸಹಿ ಹಾಕಿದೆ.
ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಒಪ್ಪಂದ 2015-20, ಪ್ರಾಜೆಕ್ಟ್ ಹಂಚಿಕೆ ಮತ್ತು ನಿರ್ವಹಣೆ ಸಹಕಾರ ಹಾಗೂ ಸೈಬರ್ ಭದ್ರತೆ ಸಹಕಾರ- ಈ ಮೂರು ಒಪ್ಪಂದಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಲೇಷ್ಯಾದ ನಜೀಬ್ ರಜಾಕ್ ಸಾಕ್ಷಿಯಾದರು.
ಸೈಬರ್ ಭದ್ರತೆ ಒಪ್ಪಂದದಲ್ಲಿ ಸಹಕರಿಸುವುದು ಬಹಳ ಮುಖ್ಯ. ಜನರು ಜಾಲತಾಣಗಳಲ್ಲೇ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡಿದ್ದು, ಅದು ಅತ್ಯಂತ ಗಂಭೀರ ವಿಷಯವಾಗಿ ಹೊರಹೊಮ್ಮಿದೆ ಎಂದು ಮೋದಿ ಈ ವೇಳೆ ಹೇಳಿದ್ದಾರೆ.
ಸೈಬರ್ ಭದ್ರತೆ ಒಪ್ಪಂದ ಅಡಿಯಲ್ಲಿ ಎರಡೂ ದೇಶಗಳ ಸಹಕಾರದೊಂದಿಗೆ ಸೈಬರ್ ಭದ್ರತಾ ನಿರ್ವಹಣೆ ಮತ್ತು ಮೇಲ್ವಿಚಾರಣೆ, ತಂತ್ರಜ್ಞಾನ ಸಹಕಾರ ಮತ್ತು ಸೈಬರ್ ದಾಳಿ ಪ್ರಾಧಾನ್ಯತೆ ನೀತಿಗಳಿಗೆ ಸಂಬಂಧಿಸಿದ ಮಾಹಿತಿಗಳ ವಿನಿಮಯ ಮತ್ತು ಸೈಬರ್ ಭದ್ರತೆಗೆ ಸಂಬಂಧಿಸಿದ ಘಟನೆಗಳ ಪರಸ್ಪರ ಪ್ರತಿಕ್ರಿಯೆ ಪ್ರಚಾರ ಒಪ್ಪಂದ ಮಾಡಿಕೊಂಡಿದೆ.
ಭಾರತದ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ ಹಾಗೂ ಮಲೇಷ್ಯಾ ಸೈಬರ್ ಭದ್ರತೆ ಸಂಸ್ಥೆ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಸೈಬರ್ ಭದ್ರತಾ ನಿರ್ವಹಣೆ, ಪ್ರಾಜೆಕ್ಟ್ ಬಿಡುಗಡೆ, ಸರ್ಕಾರದ ಕಾರ್ಯಕ್ರಮಗಳಿಗೆ ಸಂಬಂಧಿತ ಕ್ಷೇತ್ರದಲ್ಲಿ ಮೇಲ್ವಿಚಾರಣೆಗೆ ಮಲೇಷ್ಯಾದ ಆಡಳಿತ ಸಂಸ್ಥೆ ಪೆರ್ಮಾಡು ಹಾಗೂ ಭಾರತದ ನೀತಿ ಆಯೋಗ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಪೆರ್ಮಾಡು ಜೊತೆಗಿನ ವೈಯಕ್ತಿಕ ಮಾತುಕತೆಯಿಂದ ಪ್ರಭಾವಿತರಾದ ಪ್ರಧಾನಿ ಮೋದಿ, ಭಾರತವು ಸಾರ್ವಜನಿಕ ಆಡಳಿತ ಮತ್ತು ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ನೀತಿ ಆಯೋಗ ಪೆರ್ಮಾಡು ಜೊತೆ ಕಾರ್ಯ ನಿರ್ವಹಿಸಲಿದೆ ಎಂದಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.