ಕೌಲಾಲಂಪುರ್ : ಭಯೋತ್ಪಾದನೆ ಜಾಗತಿಕ ಸಮಸ್ಯೆಯಾಗಿದ್ದು, ಇದನ್ನು ನಿಗ್ರಹಿಸಲು ಹೊಸ ಕಾರ್ಯತಂತ್ರವನ್ನು ರೂಪಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಲೇಷಿಯಾದಲ್ಲಿ ನಡೆದ 10 ನೇ ಪೂರ್ವ ಏಷ್ಯಾ ಶೃಂಗಸಭೆಯನ್ನುದ್ದೇಶಿಸಿ ಭಾನುವಾರ ಮಾತನಾಡಿದ ಮೋದಿಯವರು ಪ್ಯಾರಿಸ್, ಮಾಲಿ, ಅಂಕಾರಾ, ಬೈರುತ್ ಇನ್ನಿತರೆಡೆ ಉಗ್ರರು ನಡೆಸಿದ ಕೃತ್ಯಗಳು, ಭಯೋತ್ಪಾದಕ ಗುಂಪುಗಳು ವಿಶ್ವವ್ಯಾಪಿಯಾಗಿವೆ ಹರಡಿವೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಉಗ್ರರ ನಿಗ್ರಹಕ್ಕೆ ರಾಜಕೀಯವನ್ನು ಪಕ್ಕಕ್ಕಿಟ್ಟು ನಾವೆಲ್ಲರೂ ಒಗ್ಗಟ್ಟಾಗಿ ಹೊಸ ಕಾರ್ಯತಂತ್ರ ರೂಪಿಸಬೇಕಾಗಿದೆ ಎಂದು ಹೇಳಿದರು.
ಯಾವುದೇ ರಾಷ್ಟ್ರವು ಭಯೋತ್ಪಾದನೆಯನ್ನು ಅಸ್ತ್ರವನ್ನಾಗಿ ಬಳಸಬಾರದು ಮತ್ತು ಉಗ್ರರಿಗೆ ಬೆಂಬಲ ನೀಡಬಾರದು. ಅವರಿಗೆ ಆಶ್ರಯ, ನಿಧಿ, ಶಸ್ತ್ರಾಸ್ತ್ರ ಪೂರೈಕೆಗೆ ಅವಕಾಶ ಕೊಡಬಾರದು. ಭಯೋತ್ಪಾದನೆಯನ್ನು ಧರ್ಮದೊಂದಿಗೆ ಬೆಸೆಯುವ ಯತ್ನ ಮಾಡದೆ, ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವ ಕೆಲಸಗಳು ಆಗಬೇಕು ಎಂದು ವಿಶ್ವದ ಹಲವು ನಾಯಕರು ಹೇಳಿರುವುದು ಶ್ಲಾಘನೀಯ ಎಂದರು.
ಭದ್ರತಾ ಸಹಕಾರ, ಜಲ ವಿವಾದ, ಸೈಬರ್ ಭದ್ರತೆ, ಸಮಗ್ರ ಪ್ರಾದೇಶಿಕ ಆರ್ಥಿಕ ಪಾದುಕಾರಿಕೆ ಇವೆಲ್ಲವನ್ನೂ ಅಳವಡಿಸಿಕೊಂಡು ಏಷ್ಯಾದ ನಾಯಕರೆಲ್ಲರೂ ಒಗ್ಗೂಡಿ 21 ನೇ ಶತಮಾನವನ್ನು ಏಷ್ಯಾದ ಶತಮಾನವನ್ನಾಗಿ ಮಾಡಬೇಕು ಎಂದು ಮೋದಿ ಕರೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.