ಕೌಲಾಲಂಪುರ: ಮಲೇಷಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಸ್ವಾಮಿ ವಿವೇಕಾನಂದರು ಕೇವಲ ವ್ಯಕ್ತಿಯ ಹೆಸರಲ್ಲ, ಸುಮಾರು 1000 ವರ್ಷಗಳಿಗೂ ಹೆಚ್ಚು ಪುರಾತನವಾದ ಭಾರತೀಯ ನಾಗರೀಕತೆ ಮತ್ತು ಸಂಸ್ಕೃತಿಯ ಸಾಕಾರ ರೂಪ ಅವರು. ಭಾರತೀಯರ ಆತ್ಮ ಮತ್ತು ಮನಸ್ಸು ಆಗಿದ್ದಾರೆ ಎಂದರು.
ಸ್ವಾಮಿ ವಿವೇಕಾನಂದರು ದೂರದೃಷ್ಟಿ ಮತ್ತು ಬಹಳಷ್ಟು ಆತ್ಮವಿಶ್ವಾಸವನ್ನು ಹೊಂದಿದ್ದರು. ಆ ದಿನಗಳಲ್ಲಿ ಬ್ರಿಟೀಷರ ಕಪಿಮುಷ್ಟಿಯಲ್ಲಿದ್ದ ಭಾರತ ಮುದೊಂದು ದಿನ ಜಾಗತಿಕವಾಗಿ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದ್ದರು. ಸತ್ಯದ ಅನ್ವೇಷಣೆಯಲ್ಲಿ ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರು ಇಬ್ಬರೂ ಜೊತೆಗೂಡಿದರು. ಅವರು ಶಿಷ್ಯ ಮತ್ತು ಗುರುವಿನ ಹುಡುಕಾಟದಲ್ಲಿ ಅಲ್ಲ. ಸ್ವಾಮಿ ವಿವೇಕಾನಂದರ ಪ್ರತಿಮೆ ಮಲೇಷಿಯಾದ ಜನತೆಗೆ ಒಂದು ಸ್ಫೂರ್ತಿದಾಯಕವಾಗಲಿ ಎಂದರು.
ಅಸಿಯಾನ್ ಮತ್ತು ಪೂರ್ವ ಪೂರ್ವ ಏಷ್ಯಾ ಶೃಂಗಗಳು ಮಾತನಾಡುತ್ತಿರುವ ‘ಏಕ ಏಷ್ಯಾದ’ದ ಪರಿಕಲ್ಪನೆಯನ್ನು ಮೊದಲು ಕೊಟ್ಟಿದ್ದೇ ಸ್ವಾಮಿ ವಿವೇಕಾನಂದರು. ವೇದಗಳು, ವಿವೇಕಾನಂದರಿಂದ ಭಾರತೀಯ ಸಂಸ್ಕೃತಿ ಶ್ರೀಮಂತವಾಗಿದೆ. ಮಲೇಷಿಯಾದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ ಮಾಡುತ್ತಿರುವುದು ನನ್ನ ಭಾಗ್ಯ ಎಂದರು.
12 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಮೋದಿಯವರು ಮಲೇಷಿಯಾದ ಪೆತಾಲಿಂಗ್ ಜಯಾದಲ್ಲಿರುವ ರಾಮಕೃಷ್ಣ ಆಶ್ರಮದಲ್ಲಿ ಭಾನುವಾರ ಅನಾವರಣಗೊಳಿಸಿದರು.
30 ಮಿಲಿಯನ್ ಜನಸಂಖ್ಯೆ ಹೊಂದಿರುವ ಮಲೇಷಿಯಾದಲ್ಲಿ ಸುಮಾರು 2 ಲಕ್ಷ ಭಾರತೀಯರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.