ಮಾಲಿ: ಪಶ್ಚಿಮ ಆಫ್ರಿಕಾದ ಮಾಲಿ ರಾಜಧಾನಿ ಬಮಾಕೋದ ರ್ಯಾಡಿಸನ್ ಬ್ಲೂ ಹೋಟೆಲ್ ಮೇಲೆ ಶುಕ್ರವಾರ ಇಸಿಸ್ ಉಗ್ರರು ದಾಳಿ ನಡೆಸಿ, 170 ಮಂದಿ ಒತ್ತೆಯಾಳನ್ನಾಗಿರಿಸಿಕೊಂಡಿದ್ದರು. ಇದರಲ್ಲಿ 20 ಭಾರತೀಯರೂ ಇದ್ದರು.
ಮಾಲಿ ವಿಶೇಷ ಪಡೆಯ ಕಮಾಂಡೊಗಳು ಹಲವು ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಹೋಟೆಲ್ನೊಳಗಿದ್ದವರನ್ನು ರಕ್ಷಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ. ಆದರೆ ಇವರಲ್ಲಿ 27 ಒತ್ತೆಯಾಳುಗಳನ್ನು ಇಸಿಸ್ ಉಗ್ರರು ಹತ್ಯೆ ಮಾಡಿದ್ದರು ಎಂದು ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ೫ ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎನ್ನಲಾಗಿದೆ.
10 ಉಗ್ರರು ಅಲ್ಲಾಹು ಅಕ್ಬರ್ ಎಂದು ಹೇಳುತ್ತಾ ಏಕಾಏಕಿ ಗುಂಡು ಹಾರಿಸುತ್ತಾ ಹೋಟೆಲ್ನೊಳಗೆ ನುಗ್ಗಿದ್ದರು. ಪ್ರತಿ ರೂಂಗೆ ತೆರಳಿ ಅಲ್ಲಿರುವ ಜನರನ್ನು, ಹೋಟೆಲ್ ಸಿಬ್ಬಂದಿಗಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದರು. ಉಗ್ರರು ಹೋಟೆಲ್ನೊಳಗೆ ಪ್ರವೇಶಿಸುವಾಗ ಕೆಲವರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಉಗ್ರರು ಒತ್ತೆಯಾಳುಗಳನ್ನು ಕುರಾನ್ ಪಠಿಸುವಂತೆ ಹೇಳಿದ್ದಾರೆ. ಕುರಾನ್ ಪಠಣ ಮಾಡಿದ ಕೆಲವರನ್ನು ಬಿಡುಗಡೆ ಮಾಡಿದ್ದಾರೆ.
ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುವಷ್ಟರಲ್ಲಿ ಸುಮಾರು 27 ಜನರು ಉಗ್ರರಿಂದ ಹತ್ಯೆಯಾಗಿದ್ದಾರೆ.
ಮಾಲಿ ಭದ್ರತಾಪಡೆ, ಫ್ರಾನ್ಸ್ ಸೇನೆಯ ಕಮಾಂಡೊಗಳು ಮತ್ತು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯವರು ಸೇರಿ ನಡೆಸಿದ ಕಾರ್ಯಾಚರಣೆಯಲ್ಲಿ ಉಳಿದ ಒತ್ತೆಯಾಳುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.