ನವದೆಹಲಿ: ಆದಿ ಶಂಕರಾಚಾರ್ಯರ ಜನ್ಮ ವಾರ್ಷಿಕೋತ್ಸವವನ್ನು ತತ್ವಜ್ಞಾನಿಗಳ ದಿನವನ್ನಾಗಿ ಆಚರಿಸುವಂತೆ ಶೃಂಗೇರಿ ಶಾರದಾ ಪೀಠ ಕಳುಹಿಸಿದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಸ್ವೀಕರಿಸಿದ್ದು, ಮುಂದಿನ ವರ್ಷದಿಂದ ಆದಿ ಶಂಕರಾಚಾರ್ಯರ ಜನ್ಮ ವಾರ್ಷಿಕೋತ್ಸವದ ದಿನವನ್ನು ತತ್ವಜ್ಞಾನಿಗಳ ದಿನವನ್ನಾಗಿ ಆಚರಿಸಲು ಕೇಂದ್ರ ಸರ್ಕಾರ ಮುಂದಾಗಲಿದೆ ಎಂಬ ವರದಿಯನ್ನು ಆಂಗ್ಲ ದೈನಿಕ ಪ್ರಕಟಿಸಿದೆ.
ವರದಿ ಪ್ರಕಾರ 1996 ರಿಂದಲೂ ಕೇಂದ್ರಕ್ಕೆ ಶೃಂಗೇರಿ ಶಾರದಾ ಪೀಠ ಈ ಕುರಿತು ಪ್ರಸ್ತಾವನೆಯನ್ನು ಸಲ್ಲಿಸುತ್ತಲೇ ಇತ್ತು. ಆದರೆ ಈ ಬಾರಿ ಸಂಸ್ಕೃತಿ ಸಚಿವಾಲಯದಿಂದ ಪ್ರಸ್ತಾವನೆಗೆ ಸಮ್ಮತಿ ದೊರಕಿದೆ. ಆದಿ ಶಂಕರಾಚಾರ್ಯರ ಉಪನಿಷತ್ತುಗಳ ವ್ಯಾಖ್ಯಾನ, ಭಾರತೀಯ ತತ್ವಶಾಸ್ತ್ರದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಕೇಂದ್ರ ಸಹಕರಿಸಲಿದೆ ಎಂದು ತಿಳಿಸಿದೆ.
ಆದಿ ಶಂಕರಾಚಾರ್ಯರು ನಾಲ್ಕು ದಿಕ್ಕುಗಳಲ್ಲಿ ದೇವರ ಪವಿತ್ರ ಸ್ಥಳಗಳಾದ ಬದರಿನಾಥ್, ರಾಮೇಶ್ವರಂ, ಪುರಿ ಮತ್ತು ದ್ವಾರಕಾ ಎಂಬ ’ಚಾರ್ ಧಾಮ್’ನ್ನು ಸ್ಥಾಪಿಸಿದ್ದರು. ಛಿದ್ರಗೊಂಡ ಹಿಂದೂ ಧರ್ಮವನ್ನು ಒಗ್ಗೂಡಿಸಲು ಶ್ರಮಿಸಿದವರಲ್ಲಿ ಆದಿ ಶಂಕರಾಚಾರ್ಯರೂ ಒಬ್ಬರು. ಕಾಲ್ನಡಿಗೆಯಲ್ಲೇ ಭಾರತದಾದ್ಯಂತ ಪ್ರಯಾಣ ಮಾಡಿ ಹಿಂದೂ ಧರ್ಮದ ಸಾರವನ್ನು ಹರಡಿದವರು. ಈ ನಿಟ್ಟಿನಲ್ಲಿ ಅವರ ಜನ್ಮ ವಾರ್ಷಿಕೋತ್ಸವವನ್ನು ತತ್ವಜ್ಞಾನಿಗಳ ದಿನವನ್ನಾಗಿ ಆಚರಿಸುವುದು ಅವರಿಗೆ ಸಲ್ಲಿಸುವ ಗೌರವ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.