ಮಾಸ್ಕೋ: ರಷ್ಯಾ ವಿಮಾನ ಪತನಕ್ಕೆ ಕಾರಣರಾದವರನ್ನು ಪ್ರಪಂಚದಲ್ಲಿ ಎಲ್ಲೇ ಇದ್ದರೂ ಹುಡುಕಿ ಅವರ ನಿರ್ನಾಮ ಮಾಡುತ್ತೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶಪಥ ಮಾಡಿದ್ದಾರೆ.
ಈಜಿಪ್ಟ್ ಬಳಿ ಸಿನಾಯ್ನಲ್ಲಿ ರಷ್ಯಾ ವಿಮಾನ ಪತನ ಅಕ್ಟೋಬರ್ 31 ರಂದು ಪತನಗೊಂಡಿತ್ತು. ಇದಕ್ಕೆ ಕಾರಣ ವಿಮಾನದಲ್ಲಿ ಸುಮಾರು 1 ಕೆ. ಜಿ. ತೂಕದ ಟಿಎನ್ಟಿಯಿಂದ ತಯಾರಿಸಲಾದ ಬಾಂಬ್ನಿಂದ ವಿಮಾನ ಸ್ಫೋಟಗೊಂಡಿದ್ದು, ಸುಮಾರು 224 ಪ್ರಯಾಣಿಕರು ಸಾವನ್ನಪ್ಪಿದ್ದರು. ಇದೊಂದು ಭಯೋತ್ಪಾದಕ ಕೃತ್ಯ ಎಫ್ಎಸ್ಬಿ ಸೆಕ್ಯುರಿಟ್ ಸರ್ವಿಸ್ನ ಮುಖ್ಯಸ್ಥರಾದ ಅಲೆಕ್ಸಾಂಡರ್ ಬ್ರೋಟ್ನಿಕೋವ್ ಹೇಳಿದ್ದಾರೆ.
ರಷ್ಯಾ ವಿಮಾನ ಪತನಕ್ಕೆ ನಾವೇ ಕಾರಣ ಎಂದು ಇಸಿಸ್ ಉಗ್ರರು ಹೇಳಿಕೊಂಡಿದ್ದರು. ಅದಾದ ಕೆಲವೇ ದಿನಗಳ ನಂತರ ಪ್ಯಾರಿಸ್ನಲ್ಲಿ ಸರಣಿ ದಾಳಿ ನಡೆಸಿದ ಇಸಿಸ್ ಉಗ್ರರು ಸುಮಾರು 129 ಕ್ಕೂ ಅಧಿಕ ಮಂದಿ ಸಾವನ್ನಪ್ಪಲು ಕಾರಣರಾದರು.
ಇಸಿಸ್ನ ಅಟ್ಟಹಾಸ ದಿನೇ ದಿನೇ ಹೆಚ್ಚುತ್ತಿದ್ದು, ಭಯೋತ್ಪಾದನೆಯ ನಿಗ್ರಹಕ್ಕೆ ಇದೀಗ ರಷ್ಯಾ ಸಮರ ಸಾರಿದೆ. ವಿಮಾನ ಪತನಕ್ಕೆ ಕಾರಣರಾದವರ ಬಗ್ಗೆ ಮಾಹಿತಿ ನೀಡಿದವರಿಗೆ 50 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಿದೆ.
ಸಂಭವನೀಯ ದಾಳಿಯನ್ನು ಗಮನದಲ್ಲಿಟ್ಟುಕೊಂಡು ಬ್ರಿಟನ್ 1900 ಗೂಢಾಚಾರರನ್ನು ನೇಮಕ ಮಾಡಿದೆ.
ಈಗಾಗಲೇ ಸಿರಿಯಾದ ಮೇಲೆ ಹಾರಾಡಿದ ಫ್ರಾನ್ಸ್ ಯುದ್ಧ ವಿಮಾನಗಳು ಇಸಿಸ್ ಅಡಗುತಾಣಗಳು, ತರಬೇತಿ ಕೇಂದ್ರಗಳ ಮೇಲೆ ಬಾಂಬ್ ಹಾಕಿ ಪ್ರತೀಕಾರದ ದಾಳಿ ನಡೆಸಿದೆ. 24 ತಾಸುಗಳಲ್ಲಿ ಸಿರಿಯಾದ ಉಗ್ರರ ನೆಲೆಗಳ ಮೇಲೆ ವಾಯು ದಾಳಿ ನಡೆಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.