ಪ್ಯಾರಿಸ್: ಇಂದು ನಡೆದ ಇಸಿಸ್ ಭಯೋತ್ಪಾದಕ ದಾಳಿಯಲ್ಲಿ 150ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದು, ವಿಶ್ವಾದ್ಯಂತ ವಿವಿಧ ಸ್ಮಾರಕಗಳು ಫ್ರಾನ್ಸ್ ದೇಶವನ್ನು ಬೆಂಬಲಿಸಿವೆ. ಈ ಸ್ಮಾರಕಗಳು ಫ್ರಾನ್ಸ್ ರಾಷ್ಟ್ರಧ್ವಜದ ಮೂರು ಬಣ್ಣಗಳಾದ ಕೆಂಪು, ನೀಲಿ, ಬಿಳಿ ಬಣ್ಣಗಳ ಅಲಂಕೃತ ದೀಪಗಳನ್ನು ಬೆಳಗಿಸುವ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿವೆ.
ಸಾನ್ ಫ್ರಾನ್ಸಿಸ್ಕೊ ಸಿಟಿ ಹಾಲ್, ಕಾರ್ಲ್ಗರಿಯ ಕಾರ್ಲ್ಗರಿ ಟವರ್, ಟೊರೊಂಟೋದಲ್ಲಿಯ ಸಿಎನ್ ಟವರ್, ಲಂಡನ್ನಲ್ಲಿರುವ ವೆಂಬ್ಲೆ ಕ್ರೀಡಾಂಗಣದ ಕಮಾನು, ಬ್ರೆಜಿಲ್ನ ರಿಯೊ ಡಿ ಜನೈರೋದ ಕ್ರೈಸ್ಟ್ ದಿ ರೀಡೀಮರ್, ಮೆಕ್ಸಿಕೊ ಸಿಟಿಯ ಸೆನೇಟ್ ಕಟ್ಟಡ, ದಿ ಏಂಜೆಲ್ ಡಿ ಲಾ ಇಂಡಿಪೆಂಡೆಂಷಿಯಾ, ಅಮೇರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೊದಲಾದೆಡೆಗಳಲ್ಲಿ ಕೆಂಪು, ನೀಲಿ, ಬಿಳಿ ಬಣ್ಣದ ದೀಪಗಳನ್ನು ಬೆಳಗಿಸಲಾಯಿತು.
ಈ ಮೂಲಕ ಭಯೋತ್ಪಾದನೆಯನ್ನು ನಾವೆಲ್ಲರೂ ಒಗ್ಗಟ್ಟಾಗಿ ಎದುರಿಸೋಣ ಎನ್ನುವ ಸಂದೇಶವನ್ನು ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.