ತಿರುವನಂತಪುರಂ: ಕೇರಳದಲ್ಲಿ ನಡೆದ ಗ್ರಾಮ ಪಂಚಾಯತ್ ಹಾಗೂ ನಗರಸಭೆ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್ (ಯುಡಿಎಫ್) ಪಕ್ಷ ತೀವ್ರ ಆಘಾತ ಎದುರಿಸಿದ್ದು, ಸಿಪಿಐ-ಎಂ ನೇತೃತ್ವದ ಲೆಫ್ಟ್ ಡೆಮಾಕ್ರೆಟಿಕ್ ಫ್ರಂಟ್ (ಎಲ್ಡಿಎಫ್) ಬಹುಮತ ಪಡೆದುಕೊಂಡಿದೆ. 2016ರ ವಿಧಾನಸಭಾ ಚುನಾವಣೆಯ ದೃಷ್ಟಿಯಲ್ಲಿ ಈ ಚುನಾವಣೆ ಪ್ರಾಮುಖ್ಯತೆ ಪಡೆದಿದ್ದು, ಬಿಜೆಪಿ ಕೂಡ ನಿರ್ವಹಣೆಯಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡಿದೆ.
ಎರಡು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಎಲ್ಡಿಎಫ್ 6ರಲ್ಲಿ 4 ಮಹಾನಗರ ಪಾಲಿಕೆ ಸ್ಥಾನಗಳನ್ನು ತನ್ನ ವಶವಾಗಿಸಿದ್ದು, ಪುರಸಭೆಯ 86 ಸ್ಥಾನಗಳಲ್ಲಿ 45 ಸ್ಥಾನಗಳನ್ನು ಪಡೆದಿದೆ. ಗ್ರಾಮ ಪಂಚಾಯತ್ನ 941 ಸ್ಥಾನಗಳಲ್ಲಿ 545 ಸ್ಥಾನಗಳನ್ನು ಎಲ್ಡಿಎಫ್ ಪಕ್ಷ ಗೆದ್ದುಕೊಂಡಿದೆ.
ಈ ಮಧ್ಯೆ ಯುಡಿಎಫ್ ಕೇವಲ 2 ಮಹಾನಗರ ಪಾಲಿಕೆ ಕ್ಷೇತ್ರಗಳಲ್ಲಿ ಜಯಿಸಿದ್ದು, 40 ಪುರಸಭೆ ಹಾಗೂ 366 ಗ್ರಾಮ ಪಂಚಾಯತ್ ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ವೇಳೆ ಬಿಜೆಪಿ ಹಾಗೂ ಎಡರಂಗ ಪಕ್ಷಗಳು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಶೀಘ್ರ ರಾಜೀನಾಮೆ ನೀಡುವಂತೆ ಒತ್ತಾಯಿಸಿವೆ.
ಕೇರಳದಲ್ಲಿ ಈವರೆಗೆ ನಡೆದ ವಿಧಾನಸಭೆ ಮತ್ತು ಸಂಸತ್ ಚುನಾವಣೆಯಲ್ಲಿ ಯಶಸ್ಸು ಕಾಣಲು ವಿಫಲಗೊಂಡಿದ್ದ ಬಿಜೆಪಿ ಈ ಬಾರಿ 1 ನಗರಸಭಾ ಕ್ಷೇತ್ರ ಹಾಗೂ 14 ಗ್ರಾಮ ಪಂಚಾಯತ್ ಕ್ಷೇತ್ರಗಳಲ್ಲಿ ಜಯಗಳಿಸಿದೆ. ಇದರೊಂದಿಗೆ ಅದು ತಿರುವನಂತಪುರಂ, ಎರ್ಣಾಕುಳಂ, ಪಾಲಕ್ಕಾಡ್ ಮೊದಲಾದ ಅನೇಕ ಸ್ಥಾನಗಳಲ್ಲಿ ಗಮನಾರ್ಹ ಯಶಸ್ಸು ಸಾಧಿಸುವ ಮೂಲಕ ಉಡಿಎಫ್ ಮತ್ತು ಎಲ್ಡಿಎಫ್ ಪಕ್ಷಗಳಿಗೆ ತೀವ್ರ ಪೈಪೋಟಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.