ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಉಪಕ್ರಮದ ಹಲವು ಯೋಜನೆಗಳ ಅಡಿಯಲ್ಲಿ ಹಲವು ಅಂತರ್ಜಾಲ ಆಧಾರಿತ ವೇದಿಕೆಗಳು ಹಾಗೂ ಮೊಬೈಲ್ ಆ್ಯಪ್ಗಳನ್ನು ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಬಿಡುಗಡೆಗೊಳಿಸಿದ್ದಾರೆ.
ಇದು ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅಧ್ಯಯನವನ್ನು ನಡೆಸಲು ಅವಕಾಶ ಮಾಡುವುದರ ಜೊತೆಗೆ ಪೋಷಕರು ತಮ್ಮ ಮಕ್ಕಳು ತೋರುವ ಸಾಮರ್ಥ್ಯ ಮತ್ತು ಅವರ ಹಾಜರಾತಿ ಕುರಿತು ಮಾಹಿತಿ ನೀಡಲಿದೆ ಎಂದು ಇರಾನಿ ಹೇಳಿದ್ದಾರೆ.
ಮೊಬೈಲ್ ಆ್ಯಪ್ ಮತ್ತು ’ಇ ಪಾಠಶಾಲಾ’ (E- pathshala) ಸಹಾಯದಿಂದ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಆನ್ಲೈನ್ ಅಧ್ಯಯನದ ಸಾಮಗ್ರಿ ಮತ್ತು ವಿವರಗಳನ್ನು ಪಡೆಯಬಹುದು ಎಂದು ಅವರು ಹೇಳಿದ್ದಾರೆ.
ಸಿಬಿಎಸ್ಸಿ ಶಾಲಾ ವಿದ್ಯಾರ್ಥಿಗಳಿಗಾಗಿ ದೆಹಲಿಯ ವಿಜ್ಞಾನ ಭವದಲ್ಲಿ ’ಸಾರಾಂಶ್’(Saransh) ಎಂಬ ಇನ್ನೊಂದು ಉಪಕ್ರಮ ಬಿಡುಗಡೆಗೊಳಿಸಲಾಗಿದ್ದು, ಪೋಷಕರು ತಮ್ಮ ಮಕ್ಕಳ ಕಲಿಯ ಪ್ರತ್ಯೇಕ ವಿಷಯಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ ಹೋಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ತಂತ್ರಜ್ಞಾನದಿಂದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚು ಪಾರದರ್ಶಕತೆ ತರುವ ಉದ್ದೇಶ ಹಾಗೂ ಮಕ್ಕಳಿಗೆ ಹೊಸ ಕಲಿಕೆಯ ಅವಕಾಶಗಳನ್ನು ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ. ವಿದ್ಯಾರ್ಥಿಗಳ ಪರೀಕ್ಷಾ ಹೊರೆ ಕಡಿಮೆ ಮಾಡಲು ತನ್ನ ಸಚಿವಾಲಯ ಮತ್ತಿತರ ರಾಜ್ಯ ಸರ್ಕಾರಗಳ ಜೊತೆ ಕಾರ್ಯತಂತ್ರ ರೂಪಿಸಿ ಮುಂಬರುವ ವರ್ಷದಲ್ಲಿ ಇದನ್ನು ಜಾರಿಗೆ ತರುವ ಬಗ್ಗೆ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ವೇಳೆ ಡಿಜಿಟಲ್ ವೇದಿಯಾಗಿರುವ ’ಶಾಲಾ ಸಿದ್ಧಿ’ ಬಿಡುಗಡೆಗೊಳಿಸಿದ ಅವರು, ಶಾಲೆಗಳನ್ನು ಅಭಿವೃದ್ಧಿಗೊಳಿಸುವ ಗುರಿ ಹೊಂದಿದೆ ಎಂದು ಹೇಳಿದ್ದಾರೆ. ಸಚಿವಾಲಯವು ಈ ಹಿಂದೆ ಪೋಷಕರು ಮಕ್ಕಳ ಶಾಲಾ ಉಪಸ್ಥಿತಿ, ಅಂಕ ಪಟ್ಟಿ, ಟೈಮ್ ಟೇಬಲ್ ಪಡೆಯುವ ವೆಬ್ಸೈಟ್ ’ಶಾಲಾದರ್ಪಣ್’ ಉಪಕ್ರಮ ಬಿಡುಗಡೆಗೊಳಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.