ನವದೆಹಲಿ: ಭಾರತದ ’ಉದ್ಯಮಶೀಲತಾ ಶಕ್ತಿ’ಯನ್ನು ಪ್ರಶಂಸೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದಲ್ಲಿ ಉದ್ಯೋಗ ಹುಡುಕುವವರಿಗಿಂತ ಉದ್ಯೋಗ ಸೃಷ್ಟಿಕರ್ತರ ಅಗತ್ಯವಿದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಎಕನಾಮಿಕ್ಸ್ ಕಾಂಕ್ಲೇವ್ ಉದ್ಘಾಟಿಸಿದ ಸಂದರ್ಭ ಮಾತನಾಡಿದ ಮೋದಿ, ಸುಧಾರಣಾ ಯೋಜನೆಗಳ ಕಲ್ಪನೆ ವಿಶಾಲವಾಗಿರಬೇಕು. ಸಂಕುಚಿತತೆಯಿಂದ ಕೂಡಿರಬಾರದು. ಕಲ್ಪನೆಗಳು ನಮ್ಮ ಯೋಜನೆಗಳಿಗೆ ಅಡ್ಡಿಯಾಗಬಾರದು ಎಂದರು.
ಸುಧಾರಣಾ ರೂಪಾಂತರ ಒಂದು ಪೂರ್ಣ ಪ್ರಮಾಣದ ಯೋಜನೆಯಾಗಿದ್ದು, ಅದು ಕೇವಲ ಒಂದು ವೇಗದ ಓಟ ಅಥವಾ ಅಲ್ಪಾವಧಿಯ ಪ್ರಯತ್ನವಲ್ಲ. ಕೃಷಿಯು ಭಾರತದ ಮೂಲಾಧಾರವಾಗಿ ಉಳಿದಿದ್ದು, ಅದು ಜೀವನಾಧಾರವಾಗಿ ಎಂದು ಹೇಳಿದರು.
ದೇಶದ ನಾಗರಿಕರಿಗೆ, ವಿಶೇಷವಾಗಿ ಬಡವರಿಗೆ ಉತ್ತಮ ಜೀವನ ನಡೆಸಲು ಸುಧಾರಣಾ ನೀತಿ ಸಹಕರಿಸಲಿದ್ದು, ಅದು ಸಬ್ ಕಾ ಸಾಥ್- ಸಬ್ ಕಾ ವಿಕಾಸ್ ಆಗಿದೆ. ಸಾಮಾಜಿಕ ಭದ್ರತಾ ಯೋಜನೆಗಳ ಮೂಲಕ ಸುರಕ್ಷಾ ಕವಚ ಒದಗಿಸುವ ಹೊಸ ಆರ್ಥಿಕ ಸುಧಾರಣೆಯಾಗಿದೆ ಎಂದು ಅವರು ಹೇಳಿದರು.
ತೆರಿಗೆದಾರರನ್ನು ಶ್ಲಾಘಿಸಿದ ಅವರು, 1983 ರಿಂದ 2008 ರ ನಡುವೆ ದೇಶದ ವ್ಯಾಪಾರ ಬೆಳವಣಿಗೆ ದರದ ಜಿ.ಡಿ.ಪಿ.ಯಲ್ಲಿ ಬೆಳವಣಿಗೆ ಕಂಡಿದೆ ಎಂದು ಹೇಳಿದರು.
ಎನ್ಡಿಎ ಸರಕಾರದ ವಿವಿಧ ಯೋಜನೆಗಳು, ಸಾಧನೆಗಳ ಬಗ್ಗೆ ತಿಳಿಸಿದ ಪ್ರಧಾನಿಯವರು ನೈರ್ಮಲೀಕರಣ ಮತ್ತು ಸ್ವಚ್ಛತೆಯ ಕೊರತೆಯಿಂದ ಆರೋಗ್ಯದ ಸಮಸ್ಯೆ ಹೆಚ್ಚುತ್ತಿದೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.