ಪಣಜಿ: ಭಾರತದಲ್ಲಿ ಹಲವಾರು ದುಷ್ಕೃತ್ಯಗಳನ್ನು ನಡೆಸಿ ರಕ್ತ ಹರಿಸಿರುವ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯನ್ನು ಉಗ್ರ ಸಂಘಟನೆಯೇ ಅಲ್ಲ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಸರ್ಟಿಫಿಕೇಟ್ ನೀಡಿದ್ದಾರೆ.
ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯಲ್ಲ, ಅದರ ಸದಸ್ಯರು ಉಗ್ರರೂ ಅಲ್ಲ, ಅದೊಂದು ಕೇವಲ ಪಂಥೀಯ ಸಂಘಟನೆ ಎಂದು ಆಲ್ ಇಂಡಿಯಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತ ಘಟಕದ ಮುಖಂಡ ಖುರ್ಷಿದ್ ಅಹ್ಮದ್ ಹೇಳಿದ್ದಾರೆ.
ಗೋವಾ ಕಾಂಗ್ರೆಸ್ ಹೆಡ್ಕ್ವಾಟರ್ನಲ್ಲಿ ಮಾತನಾಡಿದ ಅವರು ‘ವಿಶ್ವದ ಇತರ ಭಾಗಗಳಲ್ಲಿ ಮುಸ್ಲಿಂ ಭಯೋತ್ಪಾದಕರು ಇರಬಹುದು ಆದರೆ ಭಾರತದ ಮುಸ್ಲಿಮರು ಇದುವರೆಗೆ ಯಾವುದೇ ಭಯೋತ್ಪಾದನ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ’ ಎಂದಿದ್ದಾರೆ.
ಯುಪಿಎ ಅವಧಿಯಲ್ಲಿ ಪಂಥೀಯ ಸಂಘಟನೆಗಳು ಕೆಟ್ಟದು ಮಾಡಿದಾಗ ಅವರನ್ನು ಹಿಡಿದು ಜೈಲಿಗೆ ಹಾಕಲಾಗಿದೆ ಎಂದಿದ್ದಾರೆ.
ಭಾರತ ಮತ್ತು ಅಮೆರಿಕ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯನ್ನು ಅಧಿಕೃತವಾಗಿ ಭಯೋತ್ಪಾದನ ಸಂಘಟನೆ ಎಂದು ಘೋಷಿಸಿದೆ. ಪುಣೆ ಸ್ಫೋಟ, ಮುಂಬಯಿ ಸರಣಿ ಸ್ಫೋಟ, ವಾರಣಾಸಿ ಸ್ಫೋಟದಲ್ಲಿ ಇದರ ಕೈವಾಡ ಇರುವುದು ತಿಳಿದು ಬಂದಿದೆ. ಆದರೂ ಇದನ್ನು ಭಯೋತ್ಪಾದಕ ಸಂಘಟನೆ ಅಲ್ಲ ಎಂದು ಖುರ್ಷಿದ್ ಅಹ್ಮದ್ ಹೇಳಿಕೆ ನೀಡಿರುವುದು ದುರಾದೃಷ್ಟಕರ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.