ನವದೆಹಲಿ: ವಿದೇಶಿ ತಂತ್ರಜ್ಞಾನ ಅವಲಂಬಿತ ಕೇಂದ್ರಗಳಿಗೆ ಸ್ವದೇಶಿ ಸಂಶೋಧನಾ ಸೌಲಭ್ಯಗಳನ್ನು ಒದಗಿಸುವ ’ಇಂಪ್ರಿಂಟ್ ಇಂಡಿಯಾ’ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆಗೊಳಿಸಿದರು.
ಇಂಪ್ರಿಂಟ್ ಇಂಡಿಯಾ ಯೋಜನೆ ಅಡಿಯಲ್ಲಿ ಭಾರತೀಯ ತಾಂತ್ರಿಕ ಕೇಂದ್ರಗಳು ಸಂಶೋಧನೆ ನಡೆಸಲು ಪ್ರೋತ್ಸಾಹಿಸಲಾಗುತ್ತಿದ್ದು, ಸರ್ಕಾರ ಈ ಯೋಜನೆಗೆ ೧೦೦೦ ಕೋಟಿ ರೂ. ಮೀಸಲಿರಿಸಲಿದೆ ಎಂದು ಮೂಲಗಳು ತಿಳಿಸಿವೆ.
ಸಮಾಜವು ತಂತ್ರಜ್ಞಾನ ಆಧಾರಿತವಾಗಿದ್ದು, ಉತ್ತಮ ಹಾಗೂ ನವೀನ ತಂತ್ರಜ್ಞಾನ ಬಳಕೆಗೆ ಒತ್ತು ನೀಡುವುದು ಅಗತ್ಯ. ನಮ್ಮ ಸಂಸ್ಥೆಗಳು ತಮ್ಮದೇ ಆದ ಕೇಂದ್ರಗಳನ್ನು ತೆರೆಯುವ ಕುರಿತು ಯೋಚಿಸಬೇಕಿದೆ ಎಂದು ಮೋದಿ ಈ ವೇಳೆ ಹೇಳಿದ್ದಾರೆ.
ಈ ವೇಳೆ ಉಪಸ್ಥಿತರಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಉದ್ದೇಶಿಸಿ, ನಮ್ಮ ರಾಷ್ಟ್ರಪತಿಗಳು ನಡೆದಾಡುವ ವಿಶ್ವವಿದ್ಯಾಲಯ, ಅವರ ಜ್ಞಾನ ಭಂಢಾರ ಸಮುದ್ರದಷ್ಟು ವಿಶಾಲವಾದದ್ದು ಎಂದು ಹೊಗಳಿದರು.
ತಾಂತ್ರಿಕ ಸವಾಲುಗಳನ್ನು ಪರಿಹರಿಸಲು ಇದೊಂದು ಅಭಿವೃದ್ಧಿ ಮಾರ್ಗದರ್ಶಕವಾಗಲಿದ್ದು, ಮೇಕ್-ಇನ್-ಇಂಡಿಯಾ ಯೋಜನೆಗೆ ಮಾನವ ಸಂಪತ್ತು ಅತ್ಯಂತ ದೊಡ್ಡ ಶಕ್ತಿಯಾಗಿದೆ. ಇದರ ಅಭಿವೃದ್ಧಿಗೆ ಕಾಶಲ್ಯ ಪ್ರಮುಖವಾದುದು ಎಂದು ಅವರು ಹೇಳಿದ್ದಾರೆ.
ಇದಕ್ಕಾಗಿ ಆಂತರಿಕ ಸಚಿವರ ತಂಡವನ್ನು ರಚಿಸಲಾಗಿದ್ದು, ಈ ತಂಡವು ಮಾನವ ಸಂಪನ್ಮೂಲ ಅಭವೃದ್ಧಿ ಸಚಿವಾಲಯ, ರಕ್ಷಣಾ ಸಚಿವಾಲಯ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆಗಳನ್ನು ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.