ಇಸ್ಲಾಮಾಬಾದ್ : ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಪಾಕಿಸ್ಥಾನ ಸೇನೆಯು ನೀಡುತ್ತಿದ್ದ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಗುಪ್ತಚರ ಇಲಾಖೆ ವರದಿ ತಿಳಿಸಿದೆ. ಇದಕ್ಕೆ ಕಾರಣ ಇಂಡೋನೇಷಿಯಾದಲ್ಲಿ ಬಂಧಿಸಲ್ಪಟ್ಟ ಛೋಟಾ ರಾಜನ್.
ದಾವೂದ್ ಇಬ್ರಾಹಿಂ ಐಎಸ್ಐ ರಕ್ಷಣೆಯಲ್ಲಿ ಪಾಕ್ನಲ್ಲಿದ್ದಾನೆ ಎಂಬ ವಿಷಯವನ್ನು ತನಿಖಾಧಿಕಾರಿಗಳ ಬಳಿ ಛೋಟಾ ರಾಜನ್ ಹೇಳಿರುವ ಹಿನ್ನೆಲೆಯಲ್ಲಿ ಭಾರತದ ಅಧಿಕಾರಿಗಳು ದಾವೂದ್ ಹಾಗೂ ಆತನ ಸಹಚರ ಛೋಟಾ ಶಕೀಲ್ನನ್ನು ಬಂಧಿಸುವ ಪ್ರಯತ್ನಗಳು ನಡೆಯಬಹುದು ಎಂದು ಪಾಕಿಸ್ಥಾನ ಸೇನೆ ವಿಶೇಷ ಕಮಾಂಡೋಗಳನ್ನು ದಾವೂದ್ನ ಹೆಚ್ಚಿನ ಭದ್ರತೆಗೆ ನಿಯೋಜಿಸಿದೆ ಎನ್ನಲಾಗಿದೆ.
ಬಹಳ ವರ್ಷಗಳು ಜೊತೆಯಲ್ಲೇ ಭೂಗತ ಚಟುವಟಿಕೆಗಳಲ್ಲಿ ತೊಡಗಿದ್ದ ದಾವೂದ್ ಇಬ್ರಾಹಿಂ ಮತ್ತು ಛೋಟಾ ರಾಜನ್ 1993 ರ ಮುಂಬೈ ಸರಣಿ ಬಾಂಬ್ ಸ್ಫೋಟ ಘಟನೆ ಬಳಿಕ ಶತ್ರುಗಳಾಗಿ ಬದಲಾಗಿದ್ದರು. ಹೀಗಾಗಿ ಛೋಟಾ ರಾಜನ್ ದಾವೂದ್ ಬಗೆಗಿನ ಕೆಲವು ಅಂಶಗಳನ್ನು ಬಹಿರಂಗಗೊಳಿಸಿ ದಾವೂದ್ನನ್ನು ಬಂಧಿಸಲು ಭಾರತದ ಅಧಿಕಾರಿಗಳು ಪ್ರಯತ್ನಿಸಬಹುದು ಎಂದು ದಾವೂದ್ಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.