ನವದೆಹಲಿ: ಭಾರತ- ಆಫ್ರಿಕಾ ನಡುವಿನ ಫೋರಂ ಸಮಿತ್ಗೆ ಬೊಕೊ ಹರಾಮ್ ಮತ್ತು ಇಸಿಸ್ ಬೆದರಿಕೆ ಇದ್ದು, ಅಡ್ಡಿಪಡಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳಲಿರುವ ಗಣ್ಯರಿಗೆ ಸಂಪೂರ್ಣ ಭದ್ರತೆ ಒದಗಿಸುವಂತೆ ಕಾನೂನು ರಚನಾ ಸಂಸ್ಥೆಗೆ ಗುಪ್ತಚರ ಇಲಾಖೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಸಭೆಯಲ್ಲಿ ಭಾಗವಹಿಸಲಿರುವ ಗಣ್ಯರಿಗೆ ಹೆಚ್ಚಿನ ಅಪಾಯ, ಬೆದರಿಕೆ ಎದುರಾಗಿದೆ. ನೈಜೀರಿಯಾದಲ್ಲಿ ಸಕ್ರಿಯವಾಗಿರುವ ಬೊಕೊ ಹರಾಮ್, ಇಸಿಸ್ ಜೊತೆ ತನ್ನ ರಾಜನಿಷ್ಠೆಯನ್ನು ಸೂಚಿಸಿದೆ.
ಭಾರತದ ಉಪಖಂಡದಲ್ಲಿ ತನ್ನ ಅಸ್ತಿತ್ವವನ್ನು ಗುರುತಿಸಿಕೊಳ್ಳಲು ಯತ್ನಿಸುತ್ತಿರುವ ಇಸಿಸ್, ನೆರೆಯ ಬಾಂಗ್ಲಾದೇಶದಲ್ಲಿ ಬಂದ್ ಆಗಿರಲು ತಾನೇ ಹೊಣೆ ಎಂದಿದೆ. ಇಸಿಸ್ನ ಪ್ರಚಾರದ ಮೂಲಕ ಮೂಲಭೂತವಾದಿಗಳನ್ನು ರೂಪಿಸುತ್ತಿರುವ ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.
ವಿದೇಶಿ ಪ್ರದೇಶ ನೋಂದಣಿ ಕಚೇರಿ (foreign region registration office) ಹಾಗೂ ಪೊಲೀಸ್ ಇಲಾಖೆಯು ದೆಹಲಿಗೆ ಆಗಮಿಸಿರುವ ಆಫ್ರಿಕನ್ ಪ್ರಜೆಗಳ ಮೇಲೆ ನಿಗಾ ಇರಿಸಿದೆ. ಸುಮಾರು 25,000 ಪೊಲೀಸರು ಹಾಗೂ ಅರೆಸೇನಾ ಸಿಬ್ಬಂದಿಗಳು ದೆಹಲಿಯ ವಿವಿಧೆಡೆ ಆಫ್ರಿಕಾದ ಭದ್ರತಾ ಸಿಬ್ಬಂದಿಗಳೊಂದಿಗೆ ಕಾರ್ಯ ನಿರ್ವಹಿಸುತ್ತಿವೆ.
ಬೊಕೊ ಹರಾಮ್ ನೈಜೀರಿಯಾದ ಉಗ್ರಗಾಮಿ ಸಂಘಟನೆಯಾಗಿದೆ. ಇದು ನೈಜೀರಿಯಾದ ಚಿಕ್ಪೊಕ್ ಪಟ್ಟಣದ ಶಾಲೆಯೊಂದರ 279 ವಿದ್ಯಾರ್ಥಿನಿಯರನ್ನು ಅಪಹರಿಸುವ ಮೂಲಕ ಕುಖ್ಯಾತಿ ಪಡೆದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.