
ಲಕ್ನೋ: ಉತ್ತರ ಪ್ರದೇಶದಲ್ಲಿ 2027ರ ವಿಧಾನಸಭಾ ಚುನಾವಣೆಗಾಗಿ ‘ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್’ (AIMIM) ಮತ್ತು ‘ಆಜಾದ್ ಸಮಾಜ್ ಪಾರ್ಟಿ’ (ASP) ಮೈತ್ರಿ ಮಾಡಿಕೊಂಡಿವೆ.
ಗುರುವಾರ ಲಕ್ನೋದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ AIMIM ಮುಖ್ಯಸ್ಥ ಅಸದುದ್ದೀನ್ ಓವೈಸಿ, ಈ ಮೈತ್ರಿಕೂಟವು ASP ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ ಎಂದು ತಿಳಿಸಿದರು.
AIMIM ಮತ್ತು ASP ನಡುವಿನ ಈ ಮೈತ್ರಿಕೂಟವನ್ನು ‘ಸಾಮಾಜಿಕ್ ಪರಿವರ್ತನ್ ಮೋರ್ಚಾ’ (SPM) ಎಂದು ಕರೆಯಲಾಗುತ್ತದೆ.
“ನಮ್ಮ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಚಂದ್ರಶೇಖರ್ ಆಜಾದ್ ಅವರನ್ನು ಘೋಷಿಸಲು ನನಗೆ ಸಂತೋಷವಾಗುತ್ತಿದೆ,” ಎಂದು ಲಕ್ನೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಓವೈಸಿ ಹೇಳಿದ್ದು, ನವೆಂಬರ್ 26 ರಂದು ಬೃಹತ್ ರ್ಯಾಲಿಯನ್ನು ನಡೆಸುವುದಾಗಿಯೂ AIMIM ಮತ್ತು ASP ನಾಯಕರು ಘೋಷಿಸಿದ್ದಾರೆ.
“ಇಂದು ‘ಸಾಮಾಜಿಕ್ ಪರಿವರ್ತನ್ ಮೋರ್ಚಾ’ (SPM) ರಚನೆಯಾಗಿದೆ. ಇದು ರಾಜಕೀಯ ಮತ್ತು ಬೌದ್ಧಿಕ ಪ್ರಾಮಾಣಿಕತೆಯನ್ನು ಹೊಂದಿರುವ ಒಂದು ಬಲವಾದ ಮೈತ್ರಿಕೂಟವಾಗಿದೆ,” ಎಂದು AIMIM ಮುಖ್ಯಸ್ಥ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



