
ಹೈದರಾಬಾದ್: ವಿಶ್ವ ಹಿಂದೂ ಪರಿಷತ್ನ (ವಿಎಚ್ಪಿ) ಸಂಘಟನಾ ಕಾರ್ಯದರ್ಶಿ ಮಿಲಿಂದ್ ಪರಾಂಜಪೆ ಮತ್ತು ಇತರ ವಿಎಚ್ಪಿ ನಾಯಕರು, ನವೆಂಬರ್ 9 ರಂದು ಆಂಧ್ರಪ್ರದೇಶದ ಶಿಕ್ಷಣ ಸಚಿವರು ಹಾಗೂ ತೆಲುಗು ದೇಶಂ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾದ ನಾರಾ ಲೋಕೇಶ್ ಅವರನ್ನು ಭೇಟಿಯಾದರು.
ಈ ಭೇಟಿಯ ಸಂದರ್ಭದಲ್ಲಿ, ಆಂಧ್ರಪ್ರದೇಶದಲ್ಲಿ ದೇವಾಲಯದ ಭೂಮಿ ಮತ್ತು ದೇವಾಲಯಗಳ ರಕ್ಷಣೆ, ಗೋರಕ್ಷಣೆಯನ್ನು ಬಲಪಡಿಸುವುದು ಹಾಗೂ ಗೋಶಾಲೆಗಳ ನಿರ್ಮಾಣ, ಮತ್ತು ರಾಜ್ಯದಲ್ಲಿ ಮಾದಕವಸ್ತುಗಳ ವ್ಯಾಪಾರ ಹಾಗೂ ಬಳಕೆಯನ್ನು ತಡೆಗಟ್ಟುವ ಕುರಿತು ಚರ್ಚೆ ನಡೆಸಲಾಯಿತು.
ವಿಎಚ್ಪಿ ನಿಯೋಗದಲ್ಲಿ ಕೇಂದ್ರ ಉಪಾಧ್ಯಕ್ಷ ಗೋಕರಾಜು ಗಂಗರಾಜು, ಭಾಗ್ಯನಗರ ಕ್ಷೇತ್ರ ಕಾರ್ಯದರ್ಶಿ ತನಿಕೆಲ್ಲ ಸತ್ಯ ರವಿ ಕುಮಾರ್ ಮತ್ತು ಕೈಗಾರಿಕೋದ್ಯಮಿ ಪಿ. ಸಿ. ದೊರಸ್ವಾಮಿ ಅವರು ಉಪಸ್ಥಿತರಿದ್ದರು.
ಸಭೆಯ ನಂತರ, ನಾರಾ ಲೋಕೇಶ್ ಅವರು ವಿಎಚ್ಪಿ ನಾಯಕರನ್ನು ಸನ್ಮಾನಿಸಿದರು. ಈ ಮಾತುಕತೆಯ ವಿವರಗಳನ್ನು ಹಂಚಿಕೊಂಡ ಸಚಿವರು, ತಾವು ಈ ಪ್ರದೇಶದಲ್ಲಿ ವಿಎಚ್ಪಿ ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ ಚರ್ಚಿಸಿದ್ದಾಗಿ ತಿಳಿಸಿದರು. ಸಮಾಜ ಸೇವೆಗೆ ಅವರು ತೋರುತ್ತಿರುವ ಬದ್ಧತೆಯನ್ನು ಶ್ಲಾಘಿಸಿದ ಸಚಿವರು, ಅಗತ್ಯವಿರುವವರಿಗೆ ಸಹಾಯ ತಲುಪಿಸುವ ನಿಟ್ಟಿನಲ್ಲಿ ಕೈಗೊಳ್ಳುವ ಪ್ರಯತ್ನಗಳಿಗೆ ಬೆಂಬಲ ನೀಡಲು ತಾವು ಸಿದ್ಧರಿರುವುದಾಗಿ ವ್ಯಕ್ತಪಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



