News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

“ಭಾರತವು ಯಾವುದೇ ವಲಯದಲ್ಲಿ ಏಕಸ್ವಾಮ್ಯಕ್ಕೆ ಅವಕಾಶ ನೀಡುವುದಿಲ್ಲ”- ಎಲಾನ್‌ ಮಸ್ಕ್‌ಗೆ ಭಾರತ ತಿರಗೇಟು

ನವದೆಹಲಿ: ಭಾರತದಲ್ಲಿ ತಮ್ಮ ಕಂಪನಿಯ ಪರವಾನಗಿಗಳನ್ನು ಸ್ವಾರ್ಥ ಹಿತಾಸಕ್ತಿಗಳು ತಡೆಹಿಡಿಯುತ್ತಿವೆ ಎಂಬ ಸ್ಪೇಸ್‌ಎಕ್ಸ್ ಮತ್ತು ಸ್ಟಾರ್‌ಲಿಂಕ್ ಮುಖ್ಯಸ್ಥ ಎಲಾನ್ ಮಸ್ಕ್ ಆರೋಪಕ್ಕೆ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಶುಕ್ರವಾರ ತಿರುಗೇಟು ನೀಡಿದ್ದು, “ಭಾರತವು ಯಾವುದೇ ವಲಯದಲ್ಲಿ ಏಕಸ್ವಾಮ್ಯಕ್ಕೆ ಅವಕಾಶ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಸ್ಟಾರ್‌ಲಿಂಕ್‌ನ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಗಳನ್ನು ದೇಶೀಯ ವಾಣಿಜ್ಯ ಹಿತಾಸಕ್ತಿಗಳು ತಡೆಯುತ್ತಿವೆ ಎಂಬ ಆರೋಪವನ್ನು ದೂರಸಂಪರ್ಕ ಇಲಾಖೆಯು ತಳ್ಳಿಹಾಕಿದ ನಂತರ, ಗುರುವಾರ ಸರ್ಕಾರ ಮತ್ತು ಎಲಾನ್ ಮಸ್ಕ್ ನಡುವೆ ವಾಕ್ಸಮರ ನಡೆದಿತ್ತು.

ಸ್ಟಾರ್‌ಲಿಂಕ್‌ನ ಉಪಗ್ರಹ ಸಂವಹನ (satcom) ಸೇವೆಗಳನ್ನು ತಡೆಯಲಾಗುತ್ತಿದೆ ಎಂಬ ಮಸ್ಕ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸರ್ಕಾರ, ದೇಶದಲ್ಲಿನ ಪ್ರತಿಯೊಬ್ಬ ಉಪಗ್ರಹ ಸಂವಹನ ಪರವಾನಗಿದಾರರು ಭದ್ರತಾ ಮಾನದಂಡಗಳನ್ನು ಪಾಲಿಸುತ್ತಿರುವುದನ್ನು ಸಾಬೀತುಪಡಿಸುವುದು ಅತ್ಯಗತ್ಯ ಎಂದು ನಿನ್ನೆ ತಿಳಿಸಿತ್ತು.

ಈ ವಲಯದಲ್ಲಿ ಯಾವುದೇ ಏಕಸ್ವಾಮ್ಯಕ್ಕೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಮತ್ತು ವಾಣಿಜ್ಯ ಪರವಾನಗಿಗಾಗಿ ಅಂತಿಮ ಅನುಮೋದನೆ ಪಡೆಯುವ ಸರತಿಯಲ್ಲಿ ಮೂರು ಸಂಸ್ಥೆಗಳಿವೆ ಎಂದು ಸಿಂಧಿಯಾ ಇಂದು ಮತ್ತೊಮ್ಮೆ ಸ್ಪಷ್ಟವಾಗಿ ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top