News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭಾರತೀಯ ಪೈಲೆಟ್‌ ಸ್ಮಿತ್‌ ಮಚ್ಚಾರ್‌ ಸಾಹಸಕ್ಕೆ ಜಗತ್ತಿನಾದ್ಯಂತ ಪ್ರಶಂಸೆ

ನವದೆಹಲಿ: ದುಬೈ-ಟೆಲ್ ಅವಿವ್ ನಡುವೆ ಸಂಚರಿಸುತ್ತಿದ್ದ ‘ಫ್ಲೈದುಬೈ’ ವಿಮಾನವನ್ನು ಪತನಗೊಳಿಸಲು ಯತ್ನಿಸಿದ  ಸಹ-ಪೈಲಟ್‌ನ ದುಸ್ಸಾಹಸವನ್ನು ವಿಫಲಗೊಳಿಸಿ ನೂರಾರು ಮಂದಿಯ ಜೀವ ಉಳಿಸಿದ ಭಾರತೀಯ ಪೈಲೆಟ್‌ ಸ್ಮಿತ್‌ ಮಚ್ಚಾರ್‌ ಅವರ ಸಾಹಸಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಕೂಡ ಪೈಲೆಟ್‌ ಸಾಹಸವನ್ನು ಶ್ಲಾಘಿಸಿದ್ದಾರೆ.

“ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಒಬ್ಬ ಹೀರೋ. ಅತ್ಯಂತ ಗಂಭೀರ ಅಪಾಯದ ಸಂದರ್ಭದಲ್ಲಿ ಮತ್ತು ತೀವ್ರವಾಗಿ ಗಾಯಗೊಂಡಿದ್ದರೂ, ಅವರು ಅಪಾರ ಧೈರ್ಯ ತೋರಿಸಿದರು ಹಾಗೂ ಇತರರ ಪ್ರಾಣ ರಕ್ಷಿಸುವ ದೃಢ ಸಂಕಲ್ಪವನ್ನು ಪ್ರದರ್ಶಿಸಿದರು. ಅವರ ಶೌರ್ಯವು ನೂರಾರು ಜೀವಗಳನ್ನು ಉಳಿಸಲು ಮತ್ತು ದೊಡ್ಡ ದುರಂತವನ್ನು ತಪ್ಪಿಸಲು ನೆರವಾಯಿತು. ಕ್ಯಾಪ್ಟನ್ ಮಚ್ಚಾರ್ ಅವರ ಬಗ್ಗೆ ಭಾರತಕ್ಕೆ ಹೆಮ್ಮೆ ಇದೆ” ಎಂದು ಪ್ರಧಾನಿ ಮೋದಿ ‘ಎಕ್ಸ್’ ನಲ್ಲಿ ಬರೆದಿದ್ದಾರೆ.

ಅಲ್ಲದೆ, ಮಚ್ಚಾರ್ ಅವರು “ಶೀಘ್ರವಾಗಿ ಚೇತರಿಸಿಕೊಳ್ಳಲಿ, ಅವರಿಗೆ ಶಕ್ತಿ ಹಾಗೂ ಉತ್ತಮ ಆರೋಗ್ಯ ಲಭಿಸಲಿ” ಎಂದು ಪ್ರಧಾನಿ ಮೋದಿ ಪ್ರಾರ್ಥಿಸಿದ್ದಾರೆ.

ಭಾರತೀಯ ಪ್ರಜೆಯಾದ ಮಚ್ಚರ್, ಯುಎಇ  ಸರ್ಕಾರದ ಒಡೆತನದ ಕಡಿಮೆ ದರದ ವಿಮಾನಯಾನ ಸಂಸ್ಥೆಯಾದ ‘ಫ್ಲೈದುಬೈ’ ನಲ್ಲಿ ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಅದಕ್ಕೂ ಮೊದಲು ಅವರು 10 ವರ್ಷಗಳ ಕಾಲ ‘ಸ್ಪೈಸ್‌ಜೆಟ್’ನಲ್ಲಿ ಕೆಲಸ ಮಾಡಿದ್ದರು. ಅವರ ಲಿಂಕ್ಡ್‌ಇನ್  ಪ್ರೊಫೈಲ್ ಪ್ರಕಾರ, ಕ್ಯಾಪ್ಟನ್ ಮಚ್ಚರ್ ಅವರು ಬೋಯಿಂಗ್ 737 ವಿಮಾನಗಳ ಶ್ರೇಣಿಯಲ್ಲಿ 13 ವರ್ಷಗಳಿಗೂ ಹೆಚ್ಚು ಕಾಲ ವಾಣಿಜ್ಯ ವಿಮಾನಯಾನದ ಅನುಭವವನ್ನು ಹೊಂದಿದ್ದಾರೆ. ಅವರು ‘ಲೈನ್ ಟ್ರೈನಿಂಗ್ ಕ್ಯಾಪ್ಟನ್’ ಆಗಿ ವ್ಯಾಪಕವಾಗಿ ಸೇವೆ ಸಲ್ಲಿಸಿದ್ದು, 9,750 ಗಂಟೆಗಳಿಗೂ ಹೆಚ್ಚು ಕಾಲ ವಿಮಾನಯಾನ ನಡೆಸಿದ ಅನುಭವವನ್ನು ಹೊಂದಿದ್ದಾರೆ.

ನೆತನ್ಯಾಹು ಕೂಡ ಮಚ್ಚರ್‌ ಅವರ ಸಾಹಸವನ್ನು ಶ್ಲಾಘಿಸಿದ್ದಾರೆ. ” ಸಾಧಾರಣ ಧೈರ್ಯ ಪ್ರದರ್ಶಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ನನ್ನ ಸೆಲ್ಯೂಟ್. ಚಾಕು ಇರಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರೂ, ಅವರು ಎದೆಗುಂದದೆ ಪ್ರತಿರೋಧವೊಡ್ಡಿದರು; ಕಾಕ್‌ಪಿಟ್‌ನ ಬಾಗಿಲನ್ನು ತೆರೆಯುವ ಮೂಲಕ ಪ್ರಯಾಣಿಕರು ಮತ್ತು ಸಿಬ್ಬಂದಿಗಳು ದಾಳಿಕೋರನನ್ನು ಸದೆಬಡಿಯುವಂತೆ ಮಾಡಲು ನೆರವಾದರು. ಆ ಮೂಲಕ, ಗಾಳಿಯಲ್ಲಿ ಸಂಭವಿಸಬಹುದಿದ್ದ ಭೀಕರ ದುರಂತವೊಂದನ್ನು ತಪ್ಪಿಸಿದರು. ಇಸ್ರೇಲಿ ಪ್ರಜೆಗಳು ಮತ್ತು ಇತರ ರಾಷ್ಟ್ರಗಳ ನಾಗರಿಕರು ಸೇರಿದಂತೆ ಒಟ್ಟು 174 ಜನರ ಪ್ರಾಣವನ್ನು ಅವರು ಉಳಿಸಿದರು.ಕ್ಯಾಪ್ಟನ್ ಮಚ್ಚಾರ್ ಅವರು ಶೀಘ್ರವಾಗಿ ಮತ್ತು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಹಾರೈಸುತ್ತೇನೆ.” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top