News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 11th September 2026

×
Home About Us Advertise With s Contact Us

9/11 ದಾಳಿ ಸಂತ್ರಸ್ತರನ್ನು ನೆನಪಿಸಿಕೊಂಡ ಮೋದಿ

ನವದೆಹಲಿ: ಅಮೆರಿಕದ ವರ್ಲ್ಡ್‌ ಟ್ರೇಡ್‌ ಸೆಂಟರ್‌ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯ 25ನೇ ವರ್ಷಾಚರಣೆಯನ್ನು ಜಗತ್ತು ಸ್ಮರಿಸುತ್ತಿರುವ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ 9/11 ದಾಳಿಯ ಸಂತ್ರಸ್ತರನ್ನು ನೆನಪಿಸಿಕೊಂಡಿದ್ದು, ಭಯೋತ್ಪಾದನೆಯನ್ನು ಎದುರಿಸುವ ಭಾರತದ ದೃಢ ಸಂಕಲ್ಪವನ್ನು ಪುನರುಚ್ಛರಿಸಿದ್ದಾರೆ.

“ಭೀಕರ 9/11 ದಾಳಿ ನಡೆದು 25 ವರ್ಷಗಳಾಗಿವೆ; ಈ ಸಂದರ್ಭದಲ್ಲಿ ನಾವು ಸಂತ್ರಸ್ತರನ್ನು ಸ್ಮರಿಸಿ ಗೌರವಿಸುತ್ತೇವೆ ಮತ್ತು ಯಾರ ಜೀವನವು ಶಾಶ್ವತವಾಗಿ ಬದಲಾಯಿತೋ ಆ ಕುಟುಂಬಗಳೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ,” ಎಂದು ಅವರು ‘ಎಕ್ಸ್’ ಪೋಸ್ಟ್‌ ಮಾಡಿದ್ದಾರೆ.

ಭಯೋತ್ಪಾದನೆಯನ್ನು ಎದುರಿಸುವ ಭಾರತದ ಅಚಲ ಸಂಕಲ್ಪವನ್ನು ವ್ಯಕ್ತಪಡಿಸಲು ಪ್ರಧಾನಿ ಮೋದಿ ಈ ಅವಕಾಶವನ್ನು ಬಳಸಿಕೊಂಡರು. “ಭಯೋತ್ಪಾದನೆಯ ಬೆದರಿಕೆಯ ಸ್ವರೂಪ ಬದಲಾಗುತ್ತಲೇ ಇದ್ದರೂ, ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ವಿರುದ್ಧದ ನಮ್ಮ ಸಂಕಲ್ಪ ಮತ್ತು ವಿರೋಧವು ಅಚಲವಾಗಿದೆ. ಈ ಪಿಡುಗಿನ ವಿರುದ್ಧದ ಹೋರಾಟದ ಎಲ್ಲಾ ಪ್ರಯತ್ನಗಳೊಂದಿಗೆ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top