ಚೆನ್ನೈ: ಅಂಗಾಂಗ ದಾನದಲ್ಲಿ ಮುಂಚೂಣಿಯಲ್ಲಿರುವ ತಮಿಳುನಾಡು ರಾಜ್ಯವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಅಂಗಾಂಗ ದಾನದ ಮಹತ್ವವನ್ನು ದೇಶಕ್ಕೆ ಸಾರಿದ ಅವರು, ವರ್ಷಕ್ಕೆ ದೇಶದಲ್ಲಿ 2.5 ಲಕ್ಷ ಕಿಡ್ನಿ, ಹೃದಯ ಮತ್ತು ಲಿವರ್ನ ಅಗತ್ಯವಿದೆ ಎಂದರು.
‘ವರ್ಷಕ್ಕೆ 5 ಸಾವಿರ ಯಶಸ್ವಿ ಟ್ರಾನ್ಸ್ಪ್ಲಾಂಟ್ಗಳನ್ನು ಮಾಡಲಾಗುತ್ತದೆ, ಪ್ರತಿವರ್ಷ ನಮಗೆ ಒಂದು ಲಕ್ಷ ಕಣ್ಣಿನ ಅಗತ್ಯವಿದೆ, ಆದರೆ 25 ಸಾವಿರ ಕಣ್ಣು ಪಡೆಯಲಷ್ಟೇ ಶಕ್ತವಾಗುತ್ತಿದ್ದೇವೆ, ರಸ್ತೆ ಅಪಘಾತದಲ್ಲಿ ಸಾಯುವವರ ಅಂಗಾಂಗ ದಾನ ಮಾಡಬಹುದು, ಇದಕ್ಕೆ ಅಗತ್ಯವಿರುವ ಕಾನೂನು ಪ್ರಕ್ರಿಯೆಗಳು ಕೂಡ ಸರಳವಾಗಿವೆ’ ಎಂದಿದ್ದಾರೆ.
ಈ ನಿಟ್ಟಿನಲ್ಲಿ ತಮಿಳುನಾಡು ಮಾಡಿರುವ ಸಾಧನೆಯನ್ನು ಅವರು ಮುಕ್ತ ಕಂಠದಿಂದ ಶ್ಲಾಘಿಸಿದರು.
2008ರಲ್ಲಿ ತಮಿಳುನಾಡು ಸ್ಟೇಟ್ ಕೆಡವರ್ ಟ್ರಾನ್ಸ್ಪ್ಲಾಂಟ್ ಪ್ರೋಗ್ರಾಂ ಆರಂಭಿಸಿತು, ಪ್ರಸ್ತುತ ಅಲ್ಲಿ 55 ಪರವಾನಗಿ ಹೊಂದಿರುವ ಟ್ರಾನ್ಸ್ಪ್ಲಾಂಟ್ ಆಸ್ಪತ್ರೆಗಳಿವೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಇದರಲ್ಲಿ ಕೈಜೋಡಿಸಿವೆ.
ಅಲ್ಲಿ 2014 ರಲ್ಲಿ 155 ಮೃತ ವ್ಯಕ್ತಿಗಳು 500 ಮಂದಿಗೆ ಹೊಸ ಬದುಕನ್ನು ನೀಡಿದ್ದರು, ಇದು ದೇಶದಲ್ಲಿ ಅತೀ ಹೆಚ್ಚು ಸಂಖ್ಯೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.