
ನವದೆಹಲಿ: ಭಾರತವನ್ನು ಒಳನುಸುಳುವಿಕೆ ಮುಕ್ತಗೊಳಿಸಲು ಸರ್ಕಾರ ಬದ್ಧವಾಗಿದೆ, ಅಕ್ರಮ ಒಳನುಸುಳುವಿಕೆ ದೇಶದ ಭದ್ರತೆ, ಆರ್ಥಿಕತೆ ಮತ್ತು ಜನಸಂಖ್ಯಾ ಸಮತೋಲನಕ್ಕೆ ಸವಾಲುಗಳನ್ನು ಒಡ್ಡುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾದಿಸಿದ್ದಾರೆ.
ಗುಪ್ತಚರ ಬ್ಯೂರೋದ ರಾಷ್ಟ್ರೀಯ ಭದ್ರತಾ ತಂತ್ರಗಳ (ಎನ್‌ಎಸ್‌ಎಸ್) ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಶಾ, ಭಾರತವು “ಧರ್ಮಶಾಲೆ” ಅಥವಾ ಆಶ್ರಯ ತಾಣವಲ್ಲ ಮತ್ತು ನಾಗರಿಕರಿಗೆ ಮಾತ್ರ ದೇಶದಲ್ಲಿ ವಾಸಿಸುವ ಹಕ್ಕಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
“ಮೋದಿ ಸರ್ಕಾರವು ಅತಿ ಕಡಿಮೆ ಸಮಯದಲ್ಲಿ ದೇಶವನ್ನು ಒಳನುಸುಳುಕೋರರಿಂದ ಮುಕ್ತಗೊಳಿಸುತ್ತದೆ” ಎಂದಿದ್ದಾರೆ.
ಕಳೆದ ಎಂಟು ತಿಂಗಳುಗಳಲ್ಲಿ ಎಲ್ಲಾ ಗಡಿ ರಾಜ್ಯಗಳಿಗೆ ಪ್ರಯಾಣಿಸಿದ್ದೇನೆ ಮತ್ತು ಗಡಿ ಭದ್ರತೆಯನ್ನು ಬಲಪಡಿಸಲು ನಾಲ್ಕು ಅಂಶಗಳ ಕಾರ್ಯತಂತ್ರವನ್ನು ವಿವರಿಸುವ ದಾಖಲೆಯನ್ನು ರಾಜ್ಯಗಳೊಂದಿಗೆ ಹಂಚಿಕೊಂಡಿದ್ದೇನೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



