News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

5 ಜೈಶ್ ಉಗ್ರರನ್ನು ಬಂಧಿಸಿದ ಗುಜರಾತ್ ಎಟಿಎಸ್: ಟೈಮ್ ಬಾಂಬ್ ಸಂಚು ಬಯಲು

ಅಹ್ಮದಾಬಾದ್‌: ಪಾಕಿಸ್ಥಾನ ಮೂಲದ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಇಎಂ) ಗೆ ಸಂಬಂಧಿಸಿದ  ಐದು ಶಂಕಿತ ಭಯೋತ್ಪಾದಕರನ್ನು ಗುಜರಾತ್‌ನಾದ್ಯಂತ ವಿವಿಧ ಜಿಲ್ಲೆಗಳಿಂದ ಬಂಧಿಸಲಾಗಿದೆ. ಆರೋಪಿಗಳಲ್ಲಿ ಒಬ್ಬನು ಟೈಮ್ ಬಾಂಬ್ ಜೋಡಿಸಲು ಸಕ್ರಿಯವಾಗಿ ತಯಾರಿ ನಡೆಸುತ್ತಿದ್ದನೆಂದು ತನಿಖೆಯಿಂದ ತಿಳಿದುಬಂದಿದೆ.

ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದ ಐದು ಹೊಸ ಶಂಕಿತರನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ, ಈ ಹಿಂದೆ ಬಂಧಿತರಾಗಿದ್ದ ಮಾಡ್ಯೂಲ್ ಸದಸ್ಯರ ವಿಚಾರಣೆಯ ಸಮಯದಲ್ಲಿ ಇವರುಗಳ ಹೆಸರುಗಳು ಹೊರಬಿದ್ದ ನಂತರ ಇವರನ್ನು ಬಂಧಿಸಲಾಗಿದೆ.

ಆರೋಪಿಗಳು ಪಾಕಿಸ್ತಾನದಲ್ಲಿರುವ ತಮ್ಮ ನಿರ್ವಾಹಕರಿಂದ ಹಣಕಾಸಿನ ಸಹಾಯ ಪಡೆಯುತ್ತಿದ್ದಾರೆ ಎಂಬ ವಿಷಯ ಈ ಹಿಂದೆ ಬಹಿರಂಗಗೊಂಡಿತ್ತು.

ಬಂಧಿತರಲ್ಲಿ ಒಬ್ಬನಿಗೆ ಸ್ಫೋಟಕಗಳ ಬಗ್ಗೆ ಹೆಚ್ಚಿನ ಜ್ಞಾನವಿದೆ ಮತ್ತು ಈತ ಲೈವ್ ಟೈಮ್ ಬಾಂಬ್ ನಿರ್ಮಿಸುವ ಹಂತದಲ್ಲಿದ್ದನೆಂದು ಎಟಿಎಸ್ ಬಹಿರಂಗಪಡಿಸಿದೆ. ಗುಪ್ತಚರ ಮಾಹಿತಿಯ ಮೇರೆಗೆ ನಿಖರ ಕಾರ್ಯಾಚರಣೆ ನಡೆಸಿದ ಎಟಿಎಸ್ ತಂಡಗಳು, ಲೈವ್‌ ಟೈಮ್‌ ಬಾಂಬ್‌ ಪೂರ್ಣಗೊಳ್ಳುವ ಮೊದಲು ಶಂಕಿತರನ್ನು ಸೆರೆಹಿಡಿದಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top