ನ್ಯೂಯಾರ್ಕ್: ಅಮೇರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ವೈಟ್ ಹೌಸ್ ಆಸ್ಟರೋನಮಿ ನೈಟ್ಸ್ ಕಾರ್ಯಕ್ರಮದಲ್ಲಿ ಭಾರತೀಯ ಮೂಲದ ಅಮೇರಿಕದ ಖಗೋಳಶಾಸ್ತ್ರ ಉತ್ಸಾಹಿ ಪ್ರಣವ್ ಶಿವಕುಮಾರ್ನನ್ನು ಒಬಾಮಾ ಶ್ಲಾಘಿಸಿದ್ದಾರೆ.
ಗ್ಲೋಬಲ್ ಸೈನ್ಸ್ ಫೇರ್ನಲ್ಲಿ ಎರಡನೇ ಬಾರಿ ಜಾಗತಿಕ ಫೈನಲಿಸ್ಟ್ ಪ್ರಶಸ್ತಿ ಪಡೆಯುವ ಮೂಲಕ ಶಿವಕುಮಾರ್ ಇತಿಹಾಸ ನಿರ್ಮಿಸಿದ್ದಾನೆ. ತನ್ನ ಆರನೇ ವರ್ಷದಲ್ಲೇ ಪ್ರಸಿದ್ಧ ವಿಜ್ಞಾನಿಗಳ ಬಗ್ಗೆ ವಿಶ್ವಕೋಶ (wekipedia) ದಲ್ಲಿ ತಿಳಿದುಕೊಂಡಿದ್ದ. ಈ ವಿಜ್ಞಾನಿಗಳ ಕುರಿತು ತಿಳಿದುಕೊಳ್ಳುವುದು ಆತನ ಆಶಯವಾಗಿತ್ತು. ಅವನ ಪೋಷಕರು ಆತನನ್ನು ಪ್ರೋತ್ಸಾಹಿಸಿದರು ಎಂದು ಈ ಸಂದರ್ಭ ಒಬಾಮಾ ಹೇಳಿದ್ದಾರೆ.
ಶಿವಕುಮಾರ್ ಅಂದಿನಿಂದ ಬಾಹ್ಯಾಕಾಶದ ಕುರಿತು ಆಕರ್ಷಿತನಾಗಿದ್ದಾನೆ. ಕೆಲವು ವರ್ಷಗಳಿಂದ ಪ್ರತಿ ಶನಿವಾರದಂದು ಆತನ ಪೋಷಕರು ಆತನನ್ನು ‘Ask-A-Scientist’ ಪಾಠ ನಡೆಸುವ ಆಸ್ಟೋಫಿಸಿಕ್ಸ್ ಲ್ಯಾಬ್ಗೆ ಕರೆದೊಯ್ಯುತ್ತಿದ್ದಾರೆ. ಈ ಸಂದರ್ಭ ಆತ ಕ್ವೇಸಾರ್ನ ಗುರುತ್ವಾಕರ್ಷಣೆ ಲೆನ್ಸಿಂಗ್ ಬಗ್ಗೆ ಅಧ್ಯಯನ ನಡೆಸಲು ಅಲ್ಲಿನ ಸಂಶೋಧಕರನ್ನು ಭೇಟಿ ಮಾಡುತ್ತಿದ್ದಾನೆ ಎಂದರು. ಶಿವಕುಮಾರ್ ಎರಡು ಬಾರಿ ಗ್ಲೋಬಲ್ ಸೈನ್ಸ್ ಫೇರ್ನ ಗ್ಲೋಬಲ್ ಫೈನಲಿಸ್ಟ್ ಆಗಿ ಹೊರಹೊಮ್ಮಿದ್ದಾನೆ. ಆತನನ್ನು ಎಲ್ಲರೂ ಪ್ರಶಂಸಿಸಬೇಕು ಎಂದು ಈ ವೇಳೆ ಅವರು ಹೇಳಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ರಾತ್ರಿ ವೇಳೆ ಸಾಮಾನ್ಯವಾಗಿ ಆಕಾಶದಲ್ಲಿ ಕಾಣಿಸದ ಕಡಿಮೆ ಪ್ರಕಾಶವುಳ್ಳ ಕ್ವಾಸಾರ್ ಎಂಬ ವಸ್ತುಗಳ ಬಗ್ಗೆ ಈತ ಸಂಶೋಧನೆ ನಡೆಸಿದ್ದು, ಇದಕ್ಕಾಗಿ ಇತ ವರ್ಜಿನ್ ಗ್ಯಾಲಾಕ್ಟಿಕ್ ಪಯೋನೀರ್ ಪ್ರಶಸ್ತಿ ಪಡೆದಿದ್ದಾನೆ. ನ್ಯಾಶನಲ್ ಸ್ಪೆಲ್ಲಿಂಗ್ ಬೀ 2013’ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದ ಶಿವಕುಮಾರ್ ಸದ್ಯ ಚಿಕಾಗೋ ವಿಶ್ವವಿದ್ಯಾಲಯದ ಓರ್ವ ಪ್ರೊಫೆಸರ್ ಜೊತೆಗೂಡಿ ನಕ್ಷತ್ರಗಳ ಕುರಿತು ಅಧ್ಯಯನ ನಡೆಸುತ್ತಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.