ಹಿಸ್ಸಾರ್: ಹರಿಯಾಣದ ಹಿಸ್ಸಾರ್ ಮೂಲದ ಹೆಣ್ಣು ಮಗಳೊಬ್ಬಳು ನಾರ್ವೇಯ ಸಚಿವೆಯಾಗಿ ಇದೀಗ ಹೆಸರುವಾಸಿಯಾಗಿದ್ದಾಳೆ.
ಅಂಜು ಚೌಧರಿಯವರು ಪ್ರಸ್ತುತ ನಾರ್ವೇಯ ಸಾರಿಗೆ ಮತ್ತು ಪರಿಸರ ಸಚಿವೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ವಿದ್ಯಾಭ್ಯಾಸಕ್ಕೆಂದು ನಾರ್ವೇಗೆ ತೆರಳಿದ್ದ ಅಂಜು ವಿದ್ಯಾಭ್ಯಾಸ ಮುಗಿದ ಬಳಿಕ ಅಲ್ಲಿಯೇ ಸಾರಿಗೆ ಇಲಾಖೆಗೆ ಕೆಲಸಕ್ಕೆ ಸೇರಿದ್ದರು. ಬಳಿಕ ಸಾರಿಗೆ ಸಚಿವೆಯಾದರು.
ಇವರ ತಂದೆ ಈಗಲೂ ಹರಿಯಾಣದಲ್ಲಿ ಪಂಪ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ತನ್ನ ಮಗಳ ಸಾಧನೆಯ ಬಗ್ಗೆ ಅತೀವ ಹೆಮ್ಮೆ ಅವರಿಗಿದೆ. ಉನ್ನತ ಮಟ್ಟಕ್ಕೆ ಏರಿದರೂ ಅವರು ಇಂದಿಗೂ ತಮ್ಮ ಮೂಲವನ್ನು ಮರೆತಿಲ್ಲ.
ತನ್ನ ಊರನ್ನು ನೋಡುವ ಸಲುವಾಗಿಯೇ ಅವರು ಗುರುವಾರ ಹಿಸ್ಸಾರ್ಗೆ ಆಗಮಿಸಿದ್ದಾರೆ. ಅಲ್ಲಿನ ಜನರು ಅವರಿಗೆ ಅದ್ದೂರಿ ಸ್ವಾಗತವನ್ನು ಕೋರಿದ್ದಾರೆ.
ನಾರ್ವೇ ರಾಜಕೀಯದ ಬಗ್ಗೆ ಮಾತನಾಡಿದ ಅವರು, ಅಲ್ಲಿನ ರಾಜಕೀಯ ತುಂಬಾನೇ ವಿಭಿನ್ನವಾದುದು, ಅಲ್ಲಿ ಸಮಾನತೆ ಇದ್ದು ಮೀಸಲಾತಿ ಇಲ್ಲ. ಮತದಾರರು ವಿದ್ಯಾವಂತರಾದ್ದರಿಂದ ಭ್ರಷ್ಟಾಚಾರಗಳು ನಡೆಯುವುದಿಲ್ಲ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.