ಬ್ಲೂಮ್ಬರ್ಗ್: ಜಾನ್ಸ್ನ್& ಜಾನ್ಸ್ನ್ನ ಸಾಂಡ್ರಾ ಪೀಟರ್ಸನ್ ಹಾಗೂ ಸಿಸ್ಕೋ ಸಿಸ್ಟ್ಮ್ಸ್ನ ಮಾಜಿ ಕಾರ್ಯನಿರ್ವಾಹಕಿ ಪದ್ಮಶ್ರೀ ವಾರಿಯರ್ ಅವರನ್ನು ಮೈಕ್ರಾಸಾಫ್ಟ್ ತನ್ನ ಬೋರ್ಡ್ಗೆ ನಾಮನಿರ್ದೇಶನ ಮಾಡಿದೆ. ಜೊತೆಗೆ ಕಂಪೆನಿಯ ವಿವಿಧ ಕ್ಷೇತ್ರಗಳಲ್ಲಿ ಭಿನ್ನತೆಯನ್ನು ಹೆಚ್ಚಿಸಲು ಇಬ್ಬರು ಮಹಿಳಾ ನಿರ್ದೇಶಕರನ್ನು ನೇಮಿಸಿದೆ.
ಕಂಪ್ಯೂಟರ್ ವಿಜ್ಞಾನಿ ಹಾಗೂ ಹಾರ್ವೇ ಮಡ್ ಕಾಲೇಜಿನ ಅಧ್ಯಕ್ಷೆ ಮಾರಿಯಾ ಕ್ಲೇವ್ ಅವರ ಅವಧಿ ಡಿಸೆಂಬರ್ ತಿಂಗಳಿಗೆ ಮುಗಿಯುತ್ತಿದ್ದು, ಮರು ಚುನಾವಣೆಯನ್ನು ಬಯಸುವುದಿಲ್ಲ ಎಂದು ಮೈಕ್ರಾಸಾಫ್ಟ್ ಭದ್ರತಾ ಮತ್ತು ವಿನಿಮಯ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಸಾಂಡ್ರಾ ಪೀಟರ್ಸನ್ ಹಾಗೂ ಪದ್ಮಶ್ರೀ ವಾರಿಯರ್ ಅವರ ನೇಮಕದಿಂದ ಬೋರ್ಡ್ನ ನೌಕರರ ಒಟ್ಟು ಸಂಖ್ಯೆ 10ರಿಂದ 11ಕ್ಕೆ ಏರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.
ಕಂಪೆನಿಯ ಮುಖ್ಯ ನಿರ್ವಹಣಾಧಿಕಾರಿ ಸತ್ಯಾ ನಾಡೆಲ್ಲಾ ಅವರ ತಂತ್ರಾಂಶ ತಯಾರಕ ಕಂಪೆನಿಗಳಲ್ಲಿ ವೈವಿಧ್ಯತೆ ಒಂದು ಪ್ರಮುಖ ಆದ್ಯತೆಯಾಗಿದ್ದು, ಇದಕ್ಕೆ ಒತ್ತು ನೀಡಲಾಗಿದೆ. ಅವರು ಕಳೆದ ಬಾರಿಯ ಷೇರುದಾರರ ಸಭೆಯಲ್ಲಿ ನೇಮಕಗೊಂಡವರನ್ನು ಉಳಿಸುವ, ಮತ್ತು ಉದ್ಯೋಗದಲ್ಲಿ ಪ್ರಗತಿ ಹೊಂದುವ ಬಗ್ಗೆ ವಿವರಿಸಿದ್ದರು ಎಂದು ಕಂಪೆನಿ ಹೇಳಿದೆ. ಸದ್ಯ ಮೈಕ್ರಾಸಾಫ್ಟ್ ಕಂಪೆಯಲ್ಲಿ ಶೇ.28ರಷ್ಟು ಮಹಿಳೆಯರಿದ್ದಾರೆ ಎಂದು ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.