ಸಮೃದ್ಧ ಬೈಂದೂರು ಪರಿಕಲ್ಪನೆಯ ಅರುಣಾಚಲಂ ಕಾಲುಸಂಕ ಯೋಜನೆಯಡಿಯಲ್ಲಿ ಡಾ. ಆರ್. ಅರುಣಾಚಲಂ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಸಂಸ್ಥೆಯ ಸಹಯೋಗದೊಂದಿಗೆ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾಲುಸಂಕ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ಕಾರ್ಯಕ್ರಮವನ್ನು ಅರುಣಾಚಲಂ ಸಂಸ್ಥೆಯ ಪ್ರವರ್ತಕರಾದ ಕ್ಯಾಪ್ಟನ್ ರಮೇಶ್ ಅರುಣಾಚಲಂ ಅವರ ಜೊತೆಗೂಡಿ ಶಾಸಕರಾದ ಗುರುರಾಜ್ ಗಂಟಿಹೊಳೆಯವರು ನೆರವೇರಿಸಿದರು.


ಹೊಸಂಗಡಿ ಗ್ರಾಮದ ಅಯ್ಯಪ್ಪನಜಡ್ಡು – ಕಕ್ಕನಪಾಲು, ಮಚ್ಚಟ್ಟು ಗ್ರಾಮದ ಮಡಿವಾಳ ಕಟ್ಟು, ಆಜ್ರಿ ಗ್ರಾಮದ ತಗ್ಗುಂಜೆ, ಕೆರಾಡಿ ಗ್ರಾಮದ ಕುಳ್ಳಂಬಳ್ಳಿ, ವಂಡ್ಸೆ ಗ್ರಾಮದ ಅಬ್ಬಿಯಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು ಸರ್ಕಾರದ ಯಾವುದೇ ಅನುದಾನವಿಲ್ಲದೆ ದಾನಿಗಳ ನೆರವಿನಿಂದ ನಿರ್ಮಾಣವಾಗಲಿರುವ ಈ ಕಾಲುಸಂಕಗಳು ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡುವುದೆ ನಮ್ಮ ಆಶಯ ಎಂದು ಅಭಿಪ್ರಾಯಪಟ್ಟರು. ದಶಕಗಳಿಂದ ಈ ಗ್ರಾಮಗಳಿಂದ ಕಾಲುಸಂಕಗಳಿಗೆ ಬೇಡಿಕೆಯಿದ್ದು ಇಂದು ಅರುಣಾಚಲಂ ಸಂಸ್ಥೆಯ ಮೂಲಕ ಈಡೇರುತ್ತಿದ್ದು ಸಂತಸ ತಂದಿದೆ ಎಂದರು.
ಕ್ಯಾಪ್ಟನ್ ರಮೇಶ್ ಅರುಣಾಚಲಂ ಅವರು ಮಾತನಾಡಿ ಈ ಸತ್ಕಾರ್ಯವನ್ನು ಮಾಡಲು ನಮಗೆ ಸಹಕರಿಸಿದ ಶಾಸಕರಿಗೆ ಧನ್ಯವಾದಗಳನ್ನು ತಿಳಿಸಿದರು. ಜೊತೆಗೆ ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿ, ಜನರ ಉಪಯೋಗಕ್ಕೆ ಹಸ್ತಾಂತರಿಸುವುದಾಗಿ ಭರವಸೆ ನೀಡಿದರು.
ಸಮೃದ್ಧ ಬೈಂದೂರು ಯೋಜನೆಯಲ್ಲಿ ಈಗಾಗಲೇ ಹಲವಾರು ಕಾಲು ಸಂಕಗಳನ್ನು ಪೂರ್ಣಗೊಳಿಸಿದ್ದು, ಈ ವರ್ಷಾಂತ್ಯದಲ್ಲಿ 20 ಹೊಸ ಕಾಲುಸಂಕಗಳನ್ನು ನಿರ್ಮಿಸಿ ಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಶಾಸಕರು ಮಾಧ್ಯಮಗಳಿಗೆ ತಿಳಿಸಿದರು.
ಬೈಂದೂರು ಕ್ಷೇತ್ರದ ವಿವಿಧ ಕಡೆಗಳಲ್ಲಿ ನಡೆದ ಈ ಕಾರ್ಯಕ್ರಮಗಳಲ್ಲಿ ಆಯ ಗ್ರಾಮದ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


