
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ವಿರೋಧ ಪಕ್ಷಗಳನ್ನು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ, ಕೆಲವು ಪಕ್ಷಗಳಿಗೆ ಬಿಹಾರ ಚುನಾವಣೆಯಲ್ಲಿನ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಅಲ್ಲದೇ ಸಂಸತ್ತು ಗದ್ದಲದ ತಾಣ ಆಗಬಾರದು ಎಂದು ಆಶಿಸಿದ್ದಾರೆ.
ಪ್ರತಿಪಕ್ಷಗಳಿಗೆ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ಸಲಹೆಗಳನ್ನು ನೀಡಲು ಸಿದ್ಧ, ಆದರೆ ಚಳಿಗಾಲದ ಅಧಿವೇಶನದಲ್ಲಿ ಉಭಯ ಸದನಗಳ ಕಾರ್ಯನಿರ್ವಹಣೆಗೆ ಅಡ್ಡಿಪಡಿಯಾಗಬಾರದು ಎಂದಿದ್ದಾರೆ.
ಬಿಹಾರ ಚುನಾವಣೆಯಲ್ಲಿ ಹೆಚ್ಚಿನ ಮತದಾನ ಮತ್ತು ಮಹಿಳೆಯರ ಭಾಗವಹಿಸುವಿಕೆಯು ಭರವಸೆ ಮತ್ತು ನಂಬಿಕೆಯನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಿ ಹೇಳಿದರು. “ಜಗತ್ತು ಇದನ್ನು ಬಹಳ ಎಚ್ಚರಿಕೆಯಿಂದ ನೋಡುತ್ತಿದೆ. ಪ್ರಜಾಪ್ರಭುತ್ವವು ಮಹತ್ವದ್ದನ್ನು ತಲುಪಿಸಬಲ್ಲದು ಎಂದು ಭಾರತ ಸಾಬೀತುಪಡಿಸಿದೆ. ದೇಶವು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದರ ಮೇಲೆ ಸಂಸತ್ತು ಗಮನಹರಿಸಬೇಕು” ಎಂದು ಅವರು ಹೇಳಿದರು.
“ವಿರೋಧ ಪಕ್ಷಗಳು ಸಹ ನಮ್ಮ ಕರ್ತವ್ಯವನ್ನು ಮಾಡಬೇಕು. ಅವರು ಪ್ರಮುಖ ಸಮಸ್ಯೆಗಳನ್ನು ಎತ್ತಬೇಕು. ಅವರು ಸೋಲಿನ ನಿರಾಶೆಯಿಂದ ಹೊರಬರಬೇಕು. ದುರದೃಷ್ಟವಶಾತ್, ಕೆಲವು ಪಕ್ಷಗಳು ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಂಸತ್ತು ಚುನಾವಣಾ ಸೋಲಿನಿಂದ ಕರಗುವ ಯುದ್ಧಭೂಮಿಯಾಗಿ ಅಥವಾ ಹೆಮ್ಮೆಯನ್ನು ಪ್ರದರ್ಶಿಸುವ ಸ್ಥಳವಾಗಿ ಬದಲಾಗಬಾರದು” ಎಂದಿದ್ದಾರೆ.
“ಪಕ್ಷಗಳನ್ನು ಮೀರಿ ಯುವ ಸಂಸದರಿಗೆ ಸಂಸತ್ತಿನಲ್ಲಿ ಸಮಸ್ಯೆಗಳನ್ನು ಎತ್ತಲು ಅವಕಾಶ ನೀಡಬೇಕು ಎಂದ ಅವರು, ನಾಟಕ ಮಾಡಲು ಹಲವು ಸ್ಥಳಗಳಿವೆ. ನಾಟಕ ಮಾಡಲು ಬಯಸುವವರು ಅದನ್ನು ಅಂತಹ ಸ್ಥಳದಲ್ಲೇ ಮಾಡಬೇಖು. ಸದನದಲ್ಲಿ ಯಾವುದೇ ನಾಟಕ ಇರಬಾರದು. ಕಾರ್ಯ ಇರಬೇಕು” ಎಂದಿದ್ದಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



