ಲಂಡನ್: ಅಪರೂಪದ ರೋಗವೊಂದರಿಂದ ಪೀಡಿತರಾಗಿದ್ದ ಭಾರತೀಯ ಮೂಲದ ಆರು ವರ್ಷದ ಬಾಲಕ ಸೇರಿದಂತೆ ಒಟ್ಟು ೬ ಮಂದಿ ಮಕ್ಕಳಿಗೆ ಚಿಕಿತ್ಸೆ ನೀಡಲು ಯುಕೆಯ ಸರ್ಕಾರಿ ಅನುದಾನಿತ ಆರೋಗ್ಯ ಸಂಸ್ಥೆ ನಿರಾಕರಿಸಿದ ಘಟನೆ ನಡೆದಿದೆ.
ಡಿಎಂಡಿ(Duchenne muscular dystrophy ) ಎಂಬ ರೋಗದಿಂದ ಪೀಡಿತರಾಗಿದ್ದ ಕಿರತ್ ಮನ್ನ್ ಮತ್ತು ಇತರ 5 ಮಕ್ಕಳಿಗೆ ಚಿಕಿತ್ಸೆ ನಿರಾಕರಿಸಲಾಗಿದೆ. ಈ ರೋಗದ ಚಿಕಿತ್ಸೆ ದುಬಾರಿಯಾದ ಕಾರಣ ಈ ರೀತಿ ಮಾಡಲಾಗಿದೆ ಎಂದು ಹೇಳಲಾಗಿದೆ.
ಬ್ರಿಟನ್ನಿನ 3,500 ಬಾಲಕರಲ್ಲಿ ಒಬ್ಬರಿಗೆ ಈ ರೋಗ ಬರುತ್ತಿದೆ, ಇದರಿಂದಾಗಿ 10 ವರ್ಷ ತುಂಬುವ ಮುನ್ನವೇ ಮಕ್ಕಳು ವೀಲ್ಚೇರ್ನಲ್ಲಿ ಕೂರುವಂತಾಗುತ್ತಿದೆ. ಇದಕ್ಕೆ ಟ್ರಾನ್ಸ್ಲರ್ನ ಎಂಬ ಚಿಕಿತ್ಸೆ ಇದೆ. ಆದರೆ ಇದು ಅತ್ಯಂತ ದುಬಾರಿ ಎನ್ನಲಾಗಿದೆ.
ಈ ಮಕ್ಕಳು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರಿಗೆ ವೈಯಕ್ತಿ ಪತ್ರ ಬರೆದು ಅಂಗಲಾಚಿಕೊಂಡರು ಯಾವುದೇ ಪ್ರಯೋಜವಾಗಲಿಲ್ಲ. ಹೀಗಾಗಿ ಕಿರತ್ ಪೋಷಕರು ಸೇರಿದಂತೆ ಎಲ್ಲಾ ಮಕ್ಕಳ ತಾಯಂದಿರು ಪ್ರತಿಭಟನೆ ನಡೆಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.