ನವದೆಹಲಿ: ನೆಸ್ಲೆಯವರ ಉತ್ಪನ್ನ ಮ್ಯಾಗಿ ಇದಿಗ ಮತ್ತೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಗುಜರಾತ್ ಮತ್ತು ಕರ್ನಾಟಕದಲ್ಲಿ ಇದರ ಮೇಲೆ ಹೇರಲಾಗಿದ್ದ ನಿಷೇಧವನ್ನು ವಾಪಾಸ್ ಪಡೆದುಕೊಳ್ಳಲಾಗಿದೆ.
ಮೂರು ಸರ್ಕಾರಿ ಸ್ವಾಮ್ಯದ ಲ್ಯಾಬೋರೇಟರಿಗಳು ಮ್ಯಾಗಿಗೆ ಕ್ಲೀನ್ ಚಿಟ್ ನೀಡಿರುವ ಹಿನ್ನಲೆಯಲ್ಲಿ ಈ ರಾಜ್ಯಗಳು ನಿಷೇಧವನ್ನು ಹಿಂದಕ್ಕೆ ಪಡೆದುಕೊಂಡಿವೆ.
ಮ್ಯಾಗಿಯಲ್ಲಿ ಸೀಸಾದ ಪ್ರಮಾಣ ಹೆಚ್ಚಾಗಿದೆ ಎಂಬ ಕಾರಣಕ್ಕೆ ಕೇಂದ್ರ ಆಹಾರ ನಿಯಂತ್ರಕ ಎಫ್ಎಸ್ಎಸ್ಎಐ ಮತ್ತು ಇತರ ರಾಜ್ಯ ಸರ್ಕಾರ ಮಟ್ಟದ ನಿಯಂತ್ರಕಗಳು ಜೂನ್ನಲ್ಲಿ ಇದರ ಮೇಲೆ ನಿಷೇಧವನ್ನು ಹೇರಿದ್ದವು.
ಬಾಂಬೆ ಹೈಕೋರ್ಟ್ನ ಆದೇಶದಂತೆ ಮ್ಯಾಗಿಯನ್ನು ಮತ್ತೆ 3 ಲ್ಯಾಬೋರೇಟರಿಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು, ಈ ಲ್ಯಾಬೋರೇಟರಿಗಳು ಅನುಮತಿಯ ಮಟ್ಟದಲ್ಲೇ ಸೀಸಾವನ್ನು ಬಳಸಲಾಗಿದೆ ಎಂದು ವರದಿ ನೀಡಿದವು.
ಈ ಹಿನ್ನಲೆಯಲ್ಲಿ ಕರ್ನಾಟಕ ಮತ್ತು ಗುಜರಾತ್ ಸರ್ಕಾರಗಳು ಮ್ಯಾಗಿಯ ತಯಾರಿಕೆ ಮತ್ತು ಮಾರಾಟದ ಮೇಲಿನ ನಿಷೇಧವನ್ನು ತೆರವುಗೊಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.