ವಾಷಿಂಗ್ಟನ್: ಅಮೆರಿಕಾ ಮೂಲದ ಬಹುರಾಷ್ಟ್ರೀಯ ರಿಟೇಲ್ ಕಾರ್ಪೋರೇಶನ್ ವಾಲ್ಮಾರ್ಟ್ ಭಾರತದಲ್ಲಿ ಮಿಲಿಯನ್ ಗಟ್ಟಲೆ ಲಂಚವನ್ನು ಪಾವತಿಸಿದೆ ಎಂದು ಮೂಲಗಳು ತಿಳಿಸಿವೆ.
ವಸ್ತುಗಳನ್ನು ಕಸ್ಟಮ್ಸ್ ಮೂಲಕ ಮಾರಾಟ ಮಾಡಲು ಮತ್ತು ರಿಯಲ್ ಎಸ್ಟೇಟ್ಗೆ ಅನುಮತಿಯನ್ನು ಪಡೆಯಲು ವಾಲ್ ಮಾರ್ಟ್ ಭಾರತದ ಕೆಳಮಟ್ಟದ ಅಧಿಕಾರಿಗಳಿಗೆ ಲಂಚವನ್ನು ನೀಡಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
‘ವಾಲ್ಮಾರ್ಟ್ನಿಂದ ಕೆಲವರು 200 ಡಾಲರ್ ಪಡೆದಿದ್ದರೆ, ಅತಿ ಕಡಿಮೆ ಎಂದರೆ ಕೆಲವರು 5 ಡಾಲರ್ ಕೂಡಾ ಪಡೆದವರಿದ್ದಿದಾರೆ. ಇದನ್ನೆಲ್ಲಾ ಒಟ್ಟುಗೂಡಿಸಿದರೆ ಮಿಲಿಯನ್ ಡಾಲರ್ಗಳಷ್ಟಾಗುತ್ತದೆ’ ಎಂದು ಜರ್ನಲ್ ಹೇಳಿದೆ.
2013ರಲ್ಲಿ ಭಾರ್ತಿ ಎಂಟರ್ಪ್ರೈಸಸ್ನೊಂದಿಗೆ ಜಾಯಿಂಟ್ ವೆಂಚರ್ನೊಂದಿಗೆ ಭಾರತದಲ್ಲಿ ರಿಟೇಲ್ ಶಾಪ್ಗಳನ್ನು ತೆರೆಯಲು ವಾಲ್ಮಾರ್ಟ್ ಮುಂದಾಗಿತ್ತು. ಆದರೆ ಬಳಿಕ ಅದು ಸ್ವತಂತ್ರವಾಗಿ ಕಾರ್ಯಾರಂಭ ಮಾಡಿತು ಎಂದು ಪತ್ರಿಕೆ ವರದಿ ಮಾಡಿದೆ.
ಆದರೆ ಜರ್ನಲ್ ವರದಿಯ ಬಗ್ಗೆ ವಾಲ್ಮಾರ್ಟ್ ಇದುವರೆಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.