ಗುವಾಹಟಿ: ಅಸ್ಸಾಂ ರಾಜ್ಯದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾದೇಶಿ ನುಸುಳುಕೋರರಿಗೆ ಈಗ ಎಡಪಂಥೀಯರು ಬಹಿರಂಗವಾಗದ ಬೆಂಬಲವನ್ನು ನೀಡಲಾರಂಭಿಸಿದ್ದಾರೆ. ‘ಅಸೋಮ್ನಾಗರೀಕ್ ಸನ್ಮಿಲನ್’ ಎಂಬ ಎಡಪಂಥೀಯ ಸಂಘಟನೆಯು ಆಗಸ್ಟ್ 24 ರಂದು ಗುವಾಹಟಿಯಲ್ಲಿ ಒಂದು ದಿನವಿಡೀ ಕಾರ್ಯಕ್ರಮವನ್ನು ಆಯೋಜಿಸಿ, ಅಸ್ಸಾಂ ರಾಜ್ಯದಲ್ಲಿ ಹೊರಹಾಕಲ್ಪಟ್ಟ ಬಾಂಗ್ಲಾದೇಶಿ ಮೂಲದ ಮುಸ್ಲಿಮರಿಗೆ ಬೆಂಬಲವನ್ನು ನೀಡಿದೆ.
ಎಡಪಂಥೀಯ ವಿಚಾರವಾದಿ ಡಾ. ಹಿರೇನ್ ಗೋಹೈನ್ ಮತ್ತು ರಾಜ್ಯಸಭಾ ಸಂಸದ ಅಜಿತ್ ಭೂಯಾನ್ ನೇತೃತ್ವದ ಈ ಸಂಘಟನೆಯು ಕಾಂಗ್ರೆಸ್, ಜಮಿಯತ್ ಮತ್ತು ಇತರ ವಿರೋಧ ಪಕ್ಷಗಳ ಬೆಂಬಲದೊಂದಿಗೆ ದಿನವಿಡೀ ವಿಚಾರ ಸಂಕಿರಣ ನಡೆಸಿ ಅಕ್ರಮ ವಲಸಿಗರ ರಕ್ಷಣೆಯನ್ನು ಹೇಗೆ ಮಾಡಲಬಹುದು ಮತ್ತು ಅವರನ್ನು ಭಾರತದಲ್ಲೇ ಹೇಗೆ ಉಳಿಸಿಕೊಳ್ಳುವುದು ಎಂಬುದನ್ನು ಚರ್ಚಿಸಿದ್ದಾರೆ.
ಪ್ರಶಾಂತ್ ಭೂಷಣ್, ಸೈಯದಾ ಹಮೀದ್ ಮತ್ತು ಅನೇಕ ಎಡಪಂಥೀಯರು ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಬಾಂಗ್ಲಾದೇಶದ ಜನರಿಗೆ ಅಸ್ಸಾಂ ಮತ್ತು ಭಾರತದಲ್ಲಿ ವಾಸಿಸುವ ಹಕ್ಕಿದೆ ಎಂದು ಮಾಜಿ ಯೋಜನಾ ಆಯೋಗದ ಸದಸ್ಯೆ ಸೈಯದಾ ಹಮೀದ್ ಅಭಿಪ್ರಾಯಪಟ್ಟಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
“ನಮ್ಮ ಹೃದಯ ಅಸ್ಸಾಂನ ಮುಸ್ಲಿಮರೊಂದಿಗೆ ಇದೆ. ಬಾಂಗ್ಲಾದೇಶಿಯಾಗಿರುವುದರಲ್ಲಿ ಯಾವುದೇ ಅಪರಾಧವಿಲ್ಲ. ದೇಶವು ತುಂಬಾ ದೊಡ್ಡದಾಗಿದೆ ಮತ್ತು ಬಾಂಗ್ಲಾದೇಶಿಗಳು ಇಲ್ಲಿ ವಾಸಿಸಬಹುದು. ಅವರು ಯಾರ ಹಕ್ಕನ್ನು ಕಸಿದುಕೊಳ್ಳುತ್ತಿಲ್ಲ. ಅವರು ಕೂಡ ಮನುಷ್ಯರು, ಮತ್ತು ಅಲ್ಲಾಹನು ಈ ಜಗತ್ತನ್ನು ಮನುಷ್ಯರಿಗಾಗಿ ಸೃಷ್ಟಿಸಿದನು. ಆದ್ದರಿಂದ, ಅವರಿಗೆ ಇಲ್ಲಿ ವಾಸಿಸುವ ಹಕ್ಕಿದೆ ಮತ್ತು ನೀವು ಅವರನ್ನು ಅಷ್ಟು ಅಮಾನವೀಯವಾಗಿ ಹೊರಹಾಕಲು ಸಾಧ್ಯವಿಲ್ಲ” ಎಂದು ಸೈಯದಾ ಹಮೀದ್ ಹೇಳಿಕೆ ನೀಡಿದ್ದಾರೆ.
ಆಕೆಯ ಹೇಳಿಕೆ ಭಾರೀ ಆಕ್ರೋಶವನ್ನು ಸೃಷ್ಟಿಸಿದೆ. ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಆಲ್ ಅಸ್ಸಾಂ ವಿದ್ಯಾರ್ಥಿ ಒಕ್ಕೂಟ (ಎಎಎಸ್ಯು) ಅಧ್ಯಕ್ಷ ಉತ್ಪಲ್ ಶರ್ಮಾ, “ಹಮೀದ್ ತಮ್ಮ ಅಸ್ಸಾಂ ವಿರೋಧಿ ಮತ್ತು ಭಾರತ ವಿರೋಧಿ ಮನಸ್ಥಿತಿಯನ್ನು ಮಾತ್ರ ತೋರಿಸುತ್ತಾರೆ. ಬಾಂಗ್ಲಾದೇಶದ ನುಸುಳುಕೋರರ ಆಕ್ರಮಣದ ವಿರುದ್ಧ ಹೋರಾಡಿ ಪ್ರಾಣ ತ್ಯಾಗ ಮಾಡಿದ ಅಸ್ಸಾಂ ಚಳವಳಿಯ 855 ಹುತಾತ್ಮರ ತ್ಯಾಗವನ್ನು ಅವರು ಅವಮಾನಿಸಿದ್ದಾರೆ. ಅಸ್ಸಾಂ ಜನರ ಭಾವನೆಗಳು ಮತ್ತು ತ್ಯಾಗಗಳನ್ನು ಅವಮಾನಿಸದಂತೆ ಎಡ ನಾಯಕರಿಗೆ ಎಚ್ಚರಿಕೆ ನೀಡುತ್ತೇನೆ. ಅಸ್ಸಾಂ ಚಳವಳಿಯ ಸಮಯದಲ್ಲಿ ಅತ್ಯಾಚಾರಕ್ಕೊಳಗಾದ ಅಸ್ಸಾಂನ 58 ಮಹಿಳೆಯರಿಗೆ ಇದು ಅವಮಾನ” ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.