ನವದೆಹಲಿ: ಆಕ್ಸ್-4 ಕ್ರೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತನ್ನ ಪ್ರಯಾಣವನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ. ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಸಿಬ್ಬಂದಿ ಇಂದು ಬಹು ನಿರೀಕ್ಷಿತ ಆಕ್ಸಿಯಮ್ ಸ್ಪೇಸ್ ಮಿಷನ್ 4 ರ ಭಾಗವಾಗಿ ಬಾಹ್ಯಾಕಾಶಕ್ಕೆ ಹಾರಿದರು. ಈ ಐತಿಹಾಸಿಕ ಉಡಾವಣೆಯು ನೋಡಲು ಅಭೂತಪೂರ್ವವಾದ ದೃಶ್ಯವಾಗಿತ್ತು ಮತ್ತು ಮಾನವ ಬಾಹ್ಯಾಕಾಶ ಹಾರಾಟದ ಪ್ರಯತ್ನಗಳಲ್ಲಿ ಭಾರತದ ಪ್ರಮುಖ ಮೈಲಿಗಲ್ಲಾಗಿತ್ತು
ಲಕ್ನೋದಿಂದ ಐಎಎಫ್ ಗ್ರೂಪ್ ಕ್ಯಾಪ್ಟನ್ ಮತ್ತು ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶಕ್ಕೆ ಜಿಗಿಯುತ್ತಿರುವುದನ್ನು ಅವರ ಪೋಷಕರು ಮತ್ತು ಸಂಬಂಧಿಕರು ಕಣ್ತುಂಬಿಕೊಂಡರು, ಆಕ್ಸಿಯಮ್ 4 ಮಿಷನ್ ಅಮೆರಿಕದ ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಹಾರುತ್ತಿದ್ದಂತೆ ಭಾವನಾತ್ಮಕ ಕ್ಷಣ ಸೃಷ್ಟಿಯಾಗಿತ್ತು.
ಉಡಾವಣೆಯ ನಂತರ, ಶುಭಾಂಶು ಶುಕ್ಲಾ ಮಹತ್ವದ ಸಂದೇಶವನ್ನು ರವಾನಿಸಿದ್ದು, “ನನ್ನ ಭುಜದ ಮೇಲಿನ ಭಾರತೀಯ ಧ್ವಜ ನಾನು ಒಬ್ಬಂಟಿಯಾಗಿಲ್ಲ ಎಂದು ನನಗೆ ನೆನಪಿಸುತ್ತದೆ. ಇದು ಭಾರತದ ಮಾನವ ಬಾಹ್ಯಾಕಾಶ ಕಾರ್ಯಕ್ರಮದ ಆರಂಭ ಮತ್ತು ಎಲ್ಲಾ ಭಾರತೀಯರು ಈ ಪ್ರಯಾಣದ ಭಾಗವಾಗಬೇಕೆಂದು ನಾನು ಬಯಸುತ್ತೇನೆ. ನೀವೆಲ್ಲರೂ ಹೆಮ್ಮೆಪಡಬೇಕು. ಈ ಪ್ರಯಾಣವನ್ನು ಎಲ್ಲರೂ ಪ್ರಾರಂಭಿಸೋಣ. ಜೈ ಹಿಂದ್, ಜೈ ಭಾರತ್!” ಎಂದಿದ್ದಾರೆ.
ಸಿಬ್ಬಂದಿ ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ, ಫಾಲ್ಕನ್ 9 ರಾಕೆಟ್ನಿಂದ ಉಡಾವಣೆ ಮಾಡಲಾದ ಸ್ಪೇಸ್ಎಕ್ಸ್ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಹಾರಿದರು. ಇದು ನಾಸಾ, ಆಕ್ಸಿಯಮ್ ಸ್ಪೇಸ್, ಸ್ಪೇಸ್ಎಕ್ಸ್, ಇಸ್ರೋ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್ಎ) ನೇತೃತ್ವದ ಜಂಟಿ ಕಾರ್ಯಾಚರಣೆಯಾಗಿದೆ.
#WATCH | Lucknow | Parents, relatives of IAF Group Captain & astronaut Shubhanshu Shukla, share an emotional embrace as #Axiom4Mission lifts off from NASA's Kennedy Space Centre in Florida, US. pic.twitter.com/rIDhDpiTBS
— ANI (@ANI) June 25, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.