ಜಮ್ಮು: ಜಮ್ಮು-ಕಾಶ್ಮೀರ ಸಾಂಬಾ ವಲಯದ ಒಂದು ಬಿಎಸ್ಎಫ್ ಪೋಸ್ಟ್ಗೆ “ಸಿಂದೂರ್” ಎಂದು ಹೆಸರಿಸಲು ಗಡಿ ಭದ್ರತಾ ಪಡೆ (ಬಿಎಸ್ಎಫ್) ಪ್ರಸ್ತಾಪ ಮಾಡಿದೆ. ಮೇ 10 ರಂದು ಪಾಕಿಸ್ಥಾನ ನಡೆಸಿದ ಗಡಿಯಾಚೆಗಿನ ಶೆಲ್ ದಾಳಿಯಲ್ಲಿ ಮೃತಪಟ್ಟ ಸಿಬ್ಬಂದಿಯ ಹೆಸರನ್ನು ಇನ್ನೆಡೆರಲು ಪೋಸ್ಟ್ಗೆ ಇಡುವಂತೆಯೂ ಮನವಿ ಮಾಡಿದೆ.
ಇದರ ಕುರಿತು ಮಾತನಾಡಿದ ಬಿಎಸ್ಎಫ್ ಐಜಿ ಜಮ್ಮು ಫ್ರಾಂಟಿಯರ್ ಶಶಾಂಕ್ ಆನಂದ್, ಗಡಿಯಾಚೆಗಿನ ಶೆಲ್ ದಾಳಿಯಲ್ಲಿ ಭಾರತೀಯ ಸೇನಾ ನಾಯಕ್ ಸೇರಿದಂತೆ ಮೂವರು ಜವಾನರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
“ಮೇ 10 ರ ಬೆಳಿಗ್ಗೆ, ಪಾಕಿಸ್ಥಾನ ನಮ್ಮ ಠಾಣೆಗಳನ್ನು ಗುರಿಯಾಗಿಸಲು ಕಡಿಮೆ ಹಾರುವ ಡ್ರೋನ್ಗಳನ್ನು ಕಳುಹಿಸಿತ್ತು. ಬಿಎಸ್ಎಫ್ ಈ ಡ್ರೋನ್ಗಳನ್ನು ಸಕ್ರಿಯವಾಗಿ ತಡೆಹಿಡಿಯುತ್ತಿತ್ತು. ಆದರೆ ಒಂದು ಘಟನೆಯಲ್ಲಿ, ಬಿಎಸ್ಎಫ್ ಸಬ್-ಇನ್ಸ್ಪೆಕ್ಟರ್ ಮೊಹಮ್ಮದ್ ಇಮ್ತಿಯಾಜ್, ಕಾನ್ಸ್ಟೆಬಲ್ ದೀಪಕ್ ಕುಮಾರ್ ಮತ್ತು ಭಾರತೀಯ ಸೇನೆಯ ನಾಯಕ್ ಸುನಿಲ್ ಕುಮಾರ್ ಡ್ರೋನ್ ಅನ್ನು ಎದುರಿಸಲು ಪ್ರಯತ್ನಿಸುತ್ತಿದ್ದಾಗ ದುರಂತ ಘಟನೆ ಸಂಭವಿಸಿತು, ಡ್ರೋನ್ ಪೇಲೋಡ್ ಬೀಳಿಸಿದ ಪರಿಣಾಮವಾಗಿ ಮೂವರೂ ಸಾವನ್ನಪ್ಪಿದರು” ಎಂದಿದ್ದಾರೆ.
“ನಾವು ಕಳೆದುಕೊಂಡಿರುವ ನಮ್ಮ ಸಿಬ್ಬಂದಿಯ ಹೆಸರನ್ನು ಎರಡು ಪೋಸ್ಟ್ಗಳಿಗೆ ಮತ್ತು ಸಾಂಬಾ ವಲಯದಲ್ಲಿ ಒಂದು ಪೋಸ್ಟ್ಗೆ ‘ಸಿಂದೂರ್’ ಎಂದು ಹೆಸರಿಸಲು ಪ್ರಸ್ತಾಪ ಮುಂದಿಡುತ್ತಿದ್ದೇವೆ” ಎಂದು ಐಜಿ ಶಶಾಂಕ್ ಆನಂದ್ ಹೇಳಿದ್ದಾರೆ.
ಆಪರೇಷನ್ ಸಿಂದೂರ್ ಸಮಯದಲ್ಲಿ ಫಾರ್ವರ್ಡ್ ಪೋಸ್ಟ್ಗಳಲ್ಲಿ ಹೋರಾಡಿದ ಮಹಿಳಾ ಸಿಬ್ಬಂದಿಯನ್ನು ಐಜಿ ಆನಂದ್ ಶ್ಲಾಘಿಸಿದರು.
“ಆಪರೇಷನ್ ಸಿಂದೂರ್ ಸಮಯದಲ್ಲಿ ಬಿಎಸ್ಎಫ್ನ ಮಹಿಳಾ ಸಿಬ್ಬಂದಿ ಫಾರ್ವರ್ಡ್ ಡ್ಯೂಟಿ ಪೋಸ್ಟ್ಗಳಲ್ಲಿ ಹೋರಾಡಿದರು. ನಮ್ಮ ಧೈರ್ಯಶಾಲಿ ಮಹಿಳಾ ಸಿಬ್ಬಂದಿ, ಸಹಾಯಕ ಕಮಾಂಡೆಂಟ್ ನೇಹಾ ಭಂಡಾರಿ ಫಾರ್ವರ್ಡ್ ಪೋಸ್ಟ್ಗೆ ಕಮಾಂಡ್ ಮಾಡಿದರು, ಕಾನ್ಸ್ಟೆಬಲ್ ಮಂಜಿತ್ ಕೌರ್, ಕಾನ್ಸ್ಟೆಬಲ್ ಮಲ್ಕಿತ್ ಕೌರ್, ಕಾನ್ಸ್ಟೆಬಲ್ ಜ್ಯೋತಿ, ಕಾನ್ಸ್ಟೆಬಲ್ ಸಂಪ ಮತ್ತು ಕಾನ್ಸ್ಟೆಬಲ್ ಸ್ವಪ್ನಾ ಮತ್ತು ಇತರರು ಈ ಕಾರ್ಯಾಚರಣೆಯ ಸಮಯದಲ್ಲಿ ಪಾಕಿಸ್ಥಾನದ ವಿರುದ್ಧ ನಿಂತು ಫಾರ್ವರ್ಡ್ ಪೋಸ್ಟ್ಗಳಲ್ಲಿ ಹೋರಾಡಿದರು” ಎಂದಿದ್ದಾರೆ.
ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ ಭಯೋತ್ಪಾದಕರ ಸಂಭಾವ್ಯ ಒಳನುಸುಳುವಿಕೆಯ ಬಗ್ಗೆಯೂ ಅವರು ಮಾಹಿತಿಗಳನ್ನು ನೀಡಿದ್ದಾರೆ.
#WATCH | Jammu | On Operation Sindoor, BSF IG Jammu Shashank Anand says," BSF's women personnel fought on forward duty posts during Operation Sindoor. Our brave women personnel, Assistant Commandant Neha Bhandari commanded a forward post, Constable Manjit Kaur, Constable Malkit… pic.twitter.com/nTGZot6Zig
— ANI (@ANI) May 27, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.