ನವದೆಹಲಿ: ಗುಜರಾತ್ನ ಗಿರ್ ಅರಣ್ಯದಲ್ಲಿ ಏಷ್ಯಾಟಿಕ್ ಸಿಂಹಗಳ ಸಂಖ್ಯೆ ಕೇವಲ ಐದು ವರ್ಷಗಳಲ್ಲಿ 674 ರಿಂದ 891 ಕ್ಕೆ ಏರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಇದು ತುಂಬಾ ಪ್ರೋತ್ಸಾಹದಾಯಕ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ.
ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನ 122 ನೇ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನಿ, ಏಷ್ಯಾಟಿಕ್ ಸಿಂಹಗಳ ಸಂಖ್ಯೆ ಹೆಚ್ಚಾಗಲು ಗಿರ್ ಪ್ರದೇಶದ ಜನರ ಸಾಮೂಹಿಕ ಪ್ರಯತ್ನಗಳು ಮತ್ತು ಆಧುನಿಕ ವಿಧಾನಗಳ ಬಳಕೆ ಕಾರಣ ಎಂದು ವಿವರಿಸಿದ್ದಾರೆ.
ಸಿಂಹ ಗಣತಿಯ ನಂತರ ಸಿಂಹಗಳ ಸಂಖ್ಯೆ ಹೆಚ್ಚಾಗಿರುವುದು ಸ್ಪಷ್ಟಗೊಂಡಿದೆ, 35,000 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಒಳಗೊಂಡ 11 ಜಿಲ್ಲೆಗಳಲ್ಲಿ ಸಿಂಹಗಳ ಗಣತಿಯನ್ನು ನಡೆಸಲಾಗಿತ್ತು. ನಿಖರ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು ಈ ಕಾರ್ಯದಲ್ಲಿ ಭಾಗಿಯಾಗಿರುವ ಎಲ್ಲಾ ತಂಡಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಿದ್ದವು.
“ಈ ಸಮಾಜ ನನ್ನದು ಎಂಬ ಪ್ರಜ್ಞೆ ಬಲಗೊಂಡಾಗ ಅದ್ಭುತ ಫಲಿತಾಂಶಗಳು ಸಂಭವಿಸುತ್ತವೆ ಎಂಬುಕ್ಕೆ ಏಷ್ಯಾಟಿಕ್ ಸಿಂಹಗಳ ಜನಸಂಖ್ಯೆಯಲ್ಲಿನ ಹೆಚ್ಚಳವು ಸಾಕ್ಷಿ” ಎಂದು ಮೋದಿ ಹೇಳಿದ್ದು, ಗಣತಿ ಕಾರ್ಯದಲ್ಲಿ ಸ್ಥಳೀಯ ಸಮುದಾಯಗಳ ಒಳಗೊಳ್ಳುವಿಕೆ ಮತ್ತು ಗುಜರಾತ್ನ ಅರಣ್ಯ ಅಧಿಕಾರಿಗಳಾಗಿ ಮಹಿಳೆಯರನ್ನು ಸೇರ್ಪಡೆಗೊಳಿಸಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.