ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸೇಡು ತೀರಿಸಿಕೊಳ್ಳಲು ಹೊರಡಬೇಕಾದ ರಫೇಲ್ ಯುದ್ಧ ವಿಮಾನಗಳು ಹ್ಯಾಂಗರ್ಗಳಲ್ಲಿ ಏಕೆ ನಿಂತಿವೆ ಎಂದು ಪ್ರಶ್ನಿಸಲು ಕಾಂಗ್ರೆಸ್ ನಾಯಕ ಅಜಯ್ ರಾಯ್ ಅವರು ಆಟಿಕೆ ರಫೇಲ್ಗೆ ನಿಂಬೆ ಹಣ್ಣು, ಮೆಣಸಿನ ಕಾಯಿ ಫೋಟೋ ಶೇರ್ ಮಾಡಿದ್ದಾರೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ಕಾಂಗ್ರೆಸ್ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಭಾರತದಲ್ಲಿ ಪಾಕಿಸ್ಥಾನದ ನಿರೂಪಣೆಯನ್ನು ಹರಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ನಿಂಬೆ ಮತ್ತು ಮೆಣಸಿನಕಾಯಿಯನ್ನು ನೇತುಹಾಕಿದ ಆಟಿಕೆ ವಿಮಾನವನ್ನು ಹಿಡಿದಿರುವ ದೃಶ್ಯಗಳು ಪಾಕಿಸ್ಥಾನದಲ್ಲಿ ವೈರಲ್ ಆಗಿದ್ದು, ಭಾರತವನ್ನು ಗೇಲಿ ಮಾಡಲು ಅದನ್ನು ಪಾಕಿಸ್ಥಾನಿಯರು ಬಳಸಿಕೊಳ್ಳುತ್ತಿದ್ದಾರೆ.
ಹೀಗಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಬಿಜೆಪಿ, “ಪಾಕಿಸ್ಥಾನದ ಪಿಆರ್ ಏಜೆಂಟ್ ಕಾಂಗ್ರೆಸ್ʼ ವರ್ತಿಸುತ್ತಿದೆ ಎಂದಿದೆ.
“ಅಜಯ್ ರಾಯ್ ಆಟಿಕೆ ತೋರಿಸಿಲ್ಲ ಬದಲು ಪಾಕಿಸ್ಥಾನದ ಆಜ್ಞೆಯ ಮೇರೆಗೆ ಸಶಸ್ತ್ರ ಪಡೆಗಳ ನೈತಿಕತೆಯೊಂದಿಗೆ ಆಟವಾಡಿದ್ದಾರೆ” ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಲ್ಲ ಕಿಡಿಕಾರಿದ್ದಾರೆ. ಭಯೋತ್ಪಾದಕ ದಾಳಿಯ ನಂತರ ಯಾವುದೇ ಕ್ರಮಕೈಗೊಂಡರೂ ಕೇಂದ್ರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು, ಆದರೆ ಅದರ ನಾಯಕರು ಪಡೆಗಳ ನೈತಿಕತೆಯನ್ನು ಮುರಿಯಲು ಪ್ರಯತ್ನಿಸಿದ್ದಾ. “ಪಾಕಿಸ್ತಾನ ಏನು ಬಯಸುತ್ತದೆ ಮತ್ತು ಅವರ ನಿರೂಪಣೆ ಏನೇ ಇರಲಿ, ಕಾಂಗ್ರೆಸ್ ಪಕ್ಷವು ನಿರಂತರವಾಗಿ ಪಾಕಿಸ್ತಾನದ ಪಿಆರ್ ಏಜೆಂಟ್ನಂತೆ ಮಾತನಾಡುತ್ತಿದೆ” ಎಂದಿದ್ದಾರೆ.
#WATCH | Varanasi | Uttar Pradesh Congress President Ajay Rai shows a 'toy plane' with Rafale written on it and lemon-chillies hanging in it.
Ajay Rai says, "Terrorist activities have increased in the country, and people are suffering from it. Our youth lost their lives in the… pic.twitter.com/wIwLsa4akD
— ANI (@ANI) May 4, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.